ನಟನ ತಂಡದಿಂದ ರಂಗಶಂಕರದಲ್ಲಿ ನಾಟಕ ಪ್ರದರ್ಶನ
ಬೆಂಗಳೂರು, ಆ. 7 : ಮೈಸೂರಿನ ರಂಗತಂಡ 'ನಟನ' 'ಮೋಜಿನ ಸೀಮೆಯಾಚೆ ಒಂದೂರು' ಕನ್ನಡ ನಾಟಕವನ್ನು ರಂಗಶಂಕರದಲ್ಲಿ ಆಗಸ್ಟ್ 8, 9 ಮತ್ತು 10ರಂದು ಪ್ರದರ್ಶಿಸಲಿದೆ.
ಮೂರೂ ದಿನ ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ ಎರಡು ಪ್ರದರ್ಶನಗಳನ್ನು ಕಾಣಲಿದೆ ಈ ನಾಟಕ. ಖ್ಯಾತ ಹಿಂದಿ ನಾಟಕಕಾರ ಬಾದಲ್ ಸರ್ಕಾರ್ ಅವರ ನಾಟಕವನ್ನು ರಾಜೇಂದ್ರ ಕಾರಂತ್ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಬಾಲಾಜಿ ಮನೋಹರ್ ನಿರ್ದೇಶನ ನಾಟಕಕ್ಕಿದೆ. ಮೈಸೂರಿನ 'ನಟನ' ರಂಗ ತರಬೇತಿ ಸಂಸ್ಥೆ ಹೊಸ ಹುಡುಗರಿಂದ ಈ ನಾಟಕವನ್ನು ಆಡಿಸಿದೆ.
(ದಟ್ಸ್ ಕನ್ನಡ ಸಭೆ ಸಮಾರಂಭ)
ಮತ್ತೊಂದು ನಾಟಕ
ರಂಗಶಂಕರದಲ್ಲಿ ಅವಿರತದಿಂದ ಕೈಲಾಸಂರ ನಗೆ ನಾಟಕ












Click it and Unblock the Notifications