ಬೀದರ್: ಪ್ರತ್ಯೇಕ ಘಟನೆಗಳಲ್ಲಿ ಒಟ್ಟು ಆರು ಸಾವು
ಬೀದರ್, ಆ.4: ರಸ್ತೆ ಬದಿಯಲ್ಲಿ ನಿಂತ ಲಾರಿಗೆ ವೇಗವಾಗಿ ಚಲಿಸುತ್ತಿದ್ದ್ದ ಕಾರು ಢಿಕ್ಕಿ ಹೊಡೆದ ಪರಿಣಾಮ ಮೂವರು ಸಹೋದರರು ಸ್ಥಳದಲ್ಲೇ ಮೃತಪಟ್ಟು ಒಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಭೀಕರ ಘಟನೆ ಹುಮ್ನಾಬಾದ್ ಬಳಿಯ ಹೈದರಾಬಾದ್-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮೃತರನ್ನು ಅನಿಲ್ ಕಾಶಪ್ಪ(35), ಸುಹಿಲ್ ಕಾಶಪ್ಪ(32) ಮತ್ತು ವಿಜಯಕುಮಾರ್ ಕಾಶಪ್ಪ(38) ಎಂದು ಗುರುತಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವನನ್ನು ಇಲ್ಲಿನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದು ದುರಂತದಲ್ಲಿ ಬೀದರ್ ಜಿಲ್ಲೆಯ ಖಾಡ ಬಿ ಹಳ್ಳಿಯಲ್ಲಿ ಕಾಂಪೌಡ್ ಕುಸಿದು ಬಿದ್ದ ಕಾರಣ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಮೂರು ಮಂದಿ ಮೃತಪಟ್ಟಿದ್ದಾರೆ. ಭಾನುವಾರ ರಾತಿ ನಿದ್ರಿಸುತ್ತದ್ದ ಸಮಯದಲ್ಲಿ ಪಕ್ಕದ ಮನೆಯ ಕಾಂಪೌಂಡ್ ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
(ದಟ್ಸ್‌ಕನ್ನಡ ವಾರ್ತೆ)
ಮಳೆಯ ಹೊಡೆತಕ್ಕೆ ಉ.ಕರ್ನಾಟಕದಲ್ಲಿ 6 ಸಾವು
ಕೊಲ್ಕತ್ತಾದಲ್ಲಿ ಆಕಸ್ಮಿಕ ಸ್ಫೋಟ ನಾಲ್ಕು ಸಾವು











Click it and Unblock the Notifications