ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಟರ್ಜಿಗೆ ಎಂಬತ್ತು; ಸಿಪಿಐ(ಎಂ) ದೊಡ್ಡ ಆಪತ್ತು

By Staff
|
Google Oneindia Kannada News

Somanath Chatterjeeನವದೆಹಲಿ, ಜು.25: ಒಂದಿಲ್ಲೊಂದು ಕಾರಣಕ್ಕೆ ಸುದ್ದಿಗೆ ಗ್ರಾಸವಾಗುತ್ತಿರುವ ಅತ್ಯುತ್ತಮ ಸಂಸದೀಯ ಪಟು ಹಾಗೂ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಶುಕ್ರವಾರ 80ನೇ ವರ್ಷಕ್ಕೆ ಅಡಿಯಿಟ್ಟರು. ತಮ್ಮ ಸುದೀರ್ಘ ರಾಜಕೀಯ ಪಥದಲ್ಲಿ ಅಣು ಒಪ್ಪಂದದ ಪರ ಕೇಂದ್ರದ ಯುಪಿಎ ಸರ್ಕಾರಕ್ಕೆ ಬೆಂಬಲ ಸೂಚಿಸಿಸಿದ್ದಕೆ ತಲೆದಂಡ ತೆರಬೇಕಾಯಿತು. ಅವರನ್ನು ಸಿಪಿಐ(ಎಂ) ಪಕ್ಷದಿಂದ ಉಚ್ಚಾಟಿಸಿತ್ತು

ಜುಲೈ 25, 1929ರಲ್ಲಿ ಅಸ್ಸಾಂನ ಸಂಪ್ರದಾಯಬದ್ಧ ಕುಟುಂಬದಲ್ಲಿ ಜನಿಸಿಸಿದ ಚಟರ್ಜಿ ಅವರ ತಂದೆ ಎನ್.ಸಿ.ಚಟರ್ಜಿ ಹಿಂದೂ ಮಹಾಸಭೆಯ ನಾಯಕರಾಗಿದ್ದರು. ಕೋಲ್ಕತ್ತಾ ಹಾಗೂ ಇಂಗ್ಲೆಂಡ್‌ನಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. 1968ರಲ್ಲಿ ಸಿಪಿಐ(ಎಂ) ಪಕ್ಷಕ್ಕೆ ಸೇರಿ ರಾಜಕೀಯ ರಂಗ ಪ್ರವೇಶಿಸಿದ ಚಟರ್ಜಿ ಮೂರು ವರ್ಷಗಳ ನಂತರ ತಮ್ಮ ಸ್ವಕ್ಷೇತ್ರವಾದ ಬೋಲ್‌ಪುರ್‌ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1984ನ್ನು ಹೊರತುಪಡಿಸಿದರೆ, ಎಲ್ಲ ಚುನಾವಣೆಗಳಲ್ಲೂ ಚಟರ್ಜಿ ಲೋಕಸಭೆಗೆ ಆರಿಸಿ ಬಂದಿದ್ದರು. ಮಮತಾ ಬ್ಯಾನರ್ಜಿ ಸಿಪಿಐ(ಎಂ)ನ ಭದ್ರ ಕೋಟೆಯಾಗಿದ್ದ ಜಾದವ್‌ಪುರ್ ಕ್ಷೇತ್ರದಿಂದ ಚಟರ್ಜಿಯನ್ನು ಸೋಲಿಸಿದ್ದರು. 1996ರಲ್ಲಿ ಪ್ರಧಾನಿ ಅಭ್ಯರ್ಥಿಗೆ ಸಿಪಿಐ(ಎಂ)ನ ಹಿರಿಯ ಮುಖಂಡ ಜ್ಯೋತಿಬಸು ಅವರನ್ನು ಸೂಚಿಸಿದವರಲ್ಲಿ ಚಟರ್ಜಿ ಅವರೂ ಒಬ್ಬರು. ಕಳೆದ ವರ್ಷ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿಗಳಲ್ಲಿ ಚಟರ್ಜಿ ಇದ್ದರು ಎಂಬ ವಿಷಯವನ್ನು ಸಿಪಿಐ(ಎಂ) ಈಗ ಬಹಿರಂಗ ಪಡಿಸಿ ಮತ್ತಷ್ಟು ಕೆಸರೆರಚಾಟಕ್ಕೆ ನಾಂದಿ ಹಾಡಿದೆ.

ಚಟರ್ಜಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ಶುಕ್ರವಾರ ಮುಂಜಾನೆ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಅಧಿಕಾರಿಯನ್ನು ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ 20ನೇ ನಂಬರಿನ ಮನೆಗೆ ಕಳುಹಿಸಿದರು. ಪ್ರಧಾನಿ ಪರವಾಗಿ ಪುಷ್ಪಗುಚ್ಛವನ್ನು ಚಟರ್ಜಿ ಅವರಿಗೆ ಕೊಟ್ಟು ಶುಭ ಕೋರಲಾಯಿತು. ಸಂಸದೀಯ ಸಚಿವ ವೈಯಲಾರ್ ರವಿ ಹಾಗೂ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (NABARD) ಅಧಿಕಾರಿಗಳು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದರು.

(ಏಜೆನ್ಸೀಸ್)

ಸ್ಪೀಕರ್ ಆಗಿ ಚಟರ್ಜಿ ಮುಂದುವರಿಕೆ : ಯುಪಿಎ
ಪಕ್ಷದಿಂದ ಸೋಮನಾಥ್ ಚಟರ್ಜಿಗೆ ಗೇಟ್‌ಪಾಸ್}

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X