ಲೋಕಸಭೆ : ಓಟಿಗೆ ನೋಟು ಪ್ರಕರಣ ಸ್ಪೀಕರ್ ಮುಂದೆ

ನವದೆಹಲಿ, ಜು. 25 : ಹಣದ ಆಮಿಷ ಒಡ್ಡುವ ಮೂಲಕ ಬಿಜೆಪಿಯ ಮೂರು ಸಂಸದರನ್ನು ವಿಶ್ವಾಸಮತಕ್ಕೆ ಬಾರದಿರುವಂತೆ ಒತ್ತಾಯಿಸಿದ್ದ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಪೀಕರ್ ಸೋಮನಾಥ್ ಚಟರ್ಜಿ ಅವರಿಗೆ ದೂರು ನೀಡಲು ಬಿಜೆಪಿ ನಿರ್ಧರಿಸಿದೆ.

ತೀವ್ರ ಕುತೂಹಲ ಕೆರಳಿಸಿದ್ದ ಯುಪಿಎ ಸರ್ಕಾರದ ವಿಶ್ವಾಸಮತದ ಸಂದರ್ಭದಲ್ಲಿ ಬಿಜೆಪಿ ಮೂವರು ಸಂಸದರಾದ ಪಗ್ಗಾನ್ ಸಿಂಗ್ ಕುಲಾಸ್ತೆ, ಮಹಾವೀರ್ ಬೋಗಾರ್ ಮತ್ತು ಅಶೋಕ್ ಅರ್ಗಲ್ ಅವರಿಗೆ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ತಲಾ ಮೂರು ಕೋಟಿ ರುಗಳನ್ನು ನೀಡುತ್ತೇವೆ. ವಿಶ್ವಾಸಮತ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ ಎಂದು ಆಮಿಷ ಒಡ್ಡಿದ್ದರು ಎಂದು ಈ ಮೂವರು ಸಂಸರು ಅಂದೇ ಸಂಸತ್ತಿನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು. ಸಮಾಜವಾದಿ ಪಕ್ಷ ನೀಡಿದ್ದರು ಎನ್ನಲಾದ ನೋಟಿ ಕಂತೆಗಳನ್ನು ಸಂಸತ್ತಿನಲ್ಲಿ ಬಹಿರಂಗವಾಗಿ ತೋರಿಸಿ ಪ್ರಧಾನಮಂತ್ರಿ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಜು. 24 ರಂದು ಲೋಕಸಭೆಯ ಸಚಿವಾಲಯ ಈ ಮೂವರು ಸಂಸದರಿಂದ ಅಧಿಕೃತವಾಗಿ ಹೇಳಿಕೆಯನ್ನು ಬರೆಸಿಕೊಂಡಿತ್ತು.

ಘಟನೆ ನಂತರ ತಮ್ಮ ನಿವಾಸದಲ್ಲಿ ಎಲ್ಲ ಪಕ್ಷದ ಮುಖಂಡರ ಸಭೆ ನಡೆಸಿದ್ದ ಸ್ಪೀಕರ್ ಸೋಮನಾಥ್ ಚಟರ್ಜಿ ಸಂಸತ್ತಿನಲ್ಲಿ ಬಹಿರಂಗವಾಗಿ ಹಣವನ್ನು ತೋರಿಸಿ ಪ್ರತಿಭಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಇತಿಹಾಸದಲ್ಲಿ ಕಪ್ಪು ಚುಕ್ಕೆ. ಪ್ರಜಾತಂತ್ರದ ದೇಶಕ್ಕೆ ಅವಮಾನವಾಗುವಂಥ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸಮಾಜವಾದಿ ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಬಿಜೆಪಿ ಮೂವರು ಸಂಸದರೊಂದಿಗೆ ವ್ಯವಹಾರ ಕುದುರಿಸಲು ಮಾಡಿದ ಹರಸಾಹಸದ ವಿಡಿಯೋ ಚಿತ್ರೀಕರಣವನ್ನು ನೀಡಲಾಗುವುದು ಪಕ್ಷದ ಮೂಲಗಳು ತಿಳಿಸವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+