ಮುಷ್ಕರ ಇಲ್ಲ; ಎಂದಿನಂತೆ ಬ್ಯಾಂಕ್ ವಹಿವಾಟು

ಮುಂಬೈ, ಫೆ.25: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಭಾರತೀಯ ಬ್ಯಾಂಕ್ ಸಂಘಟನೆಗಳು ಕರೆಕೊಟ್ಟಿದ್ದ ಎರಡು ದಿನಗಳ (ಫೆ. 25-26) ಮುಷ್ಕರವನ್ನು ಹಿಂಪಡೆಯಲಾಗಿದೆ. ಹಾಗಾಗಿ 82 ವಾಣಿಜ್ಯ , 29 ವಿದೇಶಿ ಬ್ಯಾಂಕ್‌ಗಳ ಹಾಗೂ ಸರಿ ಸುಮಾರು 3,000 ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳ ವಹಿವಾಟುಗಳು ಎಂದಿನಂತೆ ನಡೆಯಲಿದೆ.

ವೇತನ ಪರಿಷ್ಕರಣೆ, ಅನುಕಂಪ ಆಧಾರಿತ ನೇಮಕಕ್ಕೆ ಆಗ್ರಹಿಸಿ, ಸ್ಟೇಟ್‌ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಹಾಗೂ ಪಿಂಚಣಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಒಂಬತ್ತು ಬ್ಯಾಂಕ್ ಸಂಘಟನೆಗಳ 900,000 ನೌಕರರು ಮುಷ್ಕರ ನಡೆಸಲು ಸಿದ್ಧರಾಗಿದ್ದರು.

ನಾವು ಕರೆಕೊಟ್ಟಿದ್ದ ಎರಡು ದಿನಗಳ ಮುಷ್ಕರವನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ, ಭಾರತೀಯ ಬ್ಯಾಂಕ್ ಸಂಘಟನೆಗಳೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಸಂಚಾಲಕ ಹಾಗೂ ಜಂಟಿ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದರು.ಮಾ.3ರಂದು ಬ್ಯಾಂಕ್ ಸಂಘಟನೆಗಳೊಂದಿಗೆ ಸಭೆ ಸೇರಿ ಚರ್ಚಿಸಿ ಒಮ್ಮತಕ್ಕೆ ಬರಲಿದ್ದೇವೆ ಎಂದು ಅವರು ತಿಳಿಸಿದರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+