ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹದಿನಾರಾಣೆ ಕನ್ನಡಿಗ ಚಿ. ಶ್ರೀನಿವಾಸರಾಜು ಕಣ್ಮರೆ

By Staff
|
Google Oneindia Kannada News

Chi. Srinivasarajuಬೆಂಗಳೂರು, ಡಿ.28:ಪ್ರೀತಿಯ ಮೇಷ್ಟ್ರು, ಕನ್ನಡ ನುಡಿಸೇವಕ ಪ್ರೊ.ಚಿ.ಶ್ರೀನಿವಾಸರಾಜು ಇನ್ನಿಲ್ಲ. ಅವರು ಶುಕ್ರವಾರ (ಡಿ.28) ಬೆಳಗ್ಗೆ 6.30ಕ್ಕೆ ತೀರ್ಥಹಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 65ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಬರುವ ಭಾನುವಾರ (ಡಿ. 30)ದಂದು ಕುಪ್ಪಳ್ಳಿಯಲ್ಲಿ ನಡೆಯಲಿರುವ ಕುವೆಂಪು ನಮನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿಮಿತ್ತ ಮಲೆನಾಡು ಪ್ರವಾಸ ಕೈಗೊಂಡಿದ್ದ ರಾಜು ಮೇಷ್ಟ್ರು ತೀರ್ಥಹಳ್ಳಿಯ ಹೋಟೆಲ್ ನಲ್ಲಿ ಗುರುವಾರ ಮೊಕ್ಕಾಂ ಮಾಡಿದ್ದರು. ಶುಕ್ರವಾರ ಬೆಳಗಾಗುತ್ತಲೇ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದರು.

ಪಾರ್ಥಿವ ಶರೀರವನ್ನು ಇಂದೇ ಬೆಂಗಳೂರಿಗೆ ತರಲಾಗುತ್ತಿದ್ದು ಅಂತ್ಯಸಂಸ್ಕಾರಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯಕ್ಕಿಂತ ಹೆಚ್ಚಾಗಿ ಕನ್ನಡದ ಪ್ರೀತಿ ಒಂದು ಮೊರದಷ್ಟು ಕಡಿಮೆಯಾಯಿತು. ಅಪಾರ ಅಭಿಮಾನಿಗಳು, ವಿದ್ಯಾರ್ಥಿಗಳು, ಸಾಹಿತ್ಯಾಭಿಮಾನಿಗಳಿಗೆ ಅವರ ಅಗಲಿಕೆ ತೀವ್ರ ನೋವುಂಟುಮಾಡಿದೆ. ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಸದ್ದಿಲ್ಲದ ಮಾಡುತ್ತಿದ್ದ, ಪ್ರಚಾರದಿಂದ ಗಾವುದ ದೂರನಿಲ್ಲುತ್ತಿದ್ದ ಶ್ರೀನಿವಾಸರಾಜು ಅಂಥ ಕನ್ನಡ ಮೇಷ್ಟು ಸಿಗುವುದು ಈಗಿನಕಾಲದಲ್ಲಿ ಕಷ್ಟ.

ಕನ್ನಡ ಸಂಘ ಅಥವಾ ಕ್ರೈಸ್ಟ್ ಕಾಲೇಜು ಅಂದರೆ ಥಟ್ಟನೆ ನೆನಪಾಗುತ್ತಿದ್ದರು ಶ್ರೀನಿವಾಸರಾಜು. ಒಂದು ಮಿಷನರಿ ಕಾಲೇಜಿನಲ್ಲಿ ಕನ್ನಡಸಂಘ ಕಟ್ಟಿ, ಪೋಷಿಸಿ ವಿದ್ಯಾರ್ಥಿಗಳನ್ನು ಕನ್ನಡಕ್ಕೆ ಆಯಸ್ಕಾಂತದಂತೆ ಸೆಳೆಯುತ್ತಿದ್ದರು ರಾಜು ಮೇಷ್ಟ್ರು. ಸಾವಿರಾರು ವಿದ್ಯಾರ್ಥಿಗಳು ಅವರಿಂದ ಕನ್ನಡ ಹೇಳಿಸಿಕೊಂಡು ಕಲಿತರು, ನಮ್ರತೆ ಮತ್ತು ಸಜ್ಜನಿಕೆಯ ಲಕ್ಷಣಗಳನ್ನು ಅವರಿಂದ ನೋಡಿ ಕಲಿತರು.

ಚಿ. ಶ್ರೀನಿವಾಸರಾಜು ಅವರು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲಿ (1942). ಕನ್ನಡದಲ್ಲಿ ಎಂ.ಎ ಹಾಗೂ ಇಂಡಾಲಜಿಯಲ್ಲಿ ಡಿಪ್ಲೊಮಾ ಪಡೆದಿದ್ದರು. ಕ್ರೈಸ್ಟ್ ಕಾಲೇಜಿನಲ್ಲಿ ಪ್ರವಾಚಕರಾಗಿ, 1987ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಸೇವೆಸಲ್ಲಿಸಿದ್ದರು. 2007ರಲ್ಲಿ ರಾಜ್ಯಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದ್ದರು.

ಮೇಷ್ಟ್ರ ಕೃತಿಗಳು:

ಕವನ ಸಂಕಲನ

*ಛಸನಾಲ ಬಂಧು

ನಾಟಕ

* ಐದು ಮೂಕ ನಾಟಕಗಳು
* ಹಳಿಯ ಮೇಲಿನ ಸದ್ದು
* ನಾಳೆ ಯಾರಿಗೂ ಇಲ್ಲ ಮತ್ತು ಇತರ ನಾಟಕಗಳು

ಅನುವಾದ

* ಬಾವಿ ಕಟ್ಟೆಯ ಬಳಿ

ಸಂಪಾದನೆ

* ನಮ್ಮ ಕೈಲಾಸಂ

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X