ಮಹಿಳಾ ಆಯೋಗ: ಪ್ರಮೀಳಾ ನೇಸರ್ಗಿ ಜಾಗಕ್ಕೆ ಶಾಲಿನಿ

ಬೆಂಗಳೂರು, ನ.07: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಯಾದ ಐಎ‌ಎಸ್ ಅಧಿಕಾರಿ ಶಾಲಿನಿ ರಜನೀಶ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಅವರು ಪ್ರಭಾರ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುವರು. ಈ ಹಿಂದೆ ಪ್ರಮೀಳಾ ನೇಸರ್ಗಿ ಅಧ್ಯಕ್ಷೆರಾಗಿದ್ದರು.

ಆಯೋಗದ ಸಿಬ್ಬಂದಿಯಿಂದ ದೂರುಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಅವರು, ಈ ಹಿಂದೆ ಸಲ್ಲಿಸಲಾಗಿದ್ದ ಒಟ್ಟು 3,296 ಅರ್ಜಿಗಳಲ್ಲಿ 1,709 ಅರ್ಜಿಗಳನ್ನು ಪರಿಶೀಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾಕಿ ಇರುವ ದೂರುಗಳನ್ನು ಪರಿಶೀಲಿಸಲು ಆಯೋಗದ ಸಲಹೆಗಾರರು ಮತ್ತು ಕಾರ್ಯಕ್ರಮ ಸಂಯೋಜಕರಿಗೆ ತಿಳಿಸಲಾಗಿದೆ ಎಂದು ಆಯೊಗದ ಕಾರ್ಯದರ್ಶಿ ಹೇಳಿದರು.

ಅಧಿಕಾರ ವಹಿಸಿಕೊಂಡ ದಿನವೇ ಮೂರು ದೂರುಗಳನ್ನು ಸ್ವೀಕರಿಸಿದ ಅಧ್ಯಕ್ಷೆ , ಬಾಕಿ ಇರುವ ಪ್ರಕರಣಗಳ ಸಮಾಲೋಚನೆಯನ್ನು ಮಂಗಳವಾರ ಮತ್ತು ಶುಕ್ರವಾರ ಆಯೋಗದ ಕಚೇರಿಯಲ್ಲಿ ನಡೆಸಲಾಗುವುದು. ಬಾಕಿ ಇರುವ ಅರ್ಜಿಗಳ ಪರಿಶೀಲನೆಯನ್ನು ಆಯೋಗದ ಕಾರ್ಯಕ್ರಮ ಸಂಯೋಜಕರಿಗೆ ಹಾಗೂ ಸಲಹೆಗಾರರಿಗೆ ವಹಿಸಿ ಶೀಘ್ರ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+