ವಿಶ್ವದ 200ಕಂಪನಿಗಳ ಸೆಳೆದ ಬೆಂಗಳೂರು ಐಟಿ ಮೇಳ
ಬೆಂಗಳೂರು, ಅ.25 : ಏಷ್ಯಾದ ಅತಿ ದೊಡ್ಡ ಐಟಿ ಮತ್ತು ಟೆಲಿಕಾಂ ಮೇಳ 'ಬೆಂಗಳೂರುಐಟಿ.ಇನ್' ಅ.29ರಿಂದ ನ.1ರವರೆಗೆ ನಗರದಲ್ಲಿ ಜರುಗಲಿದೆ. ಈ ವಾರ್ಷಿಕ ಉತ್ಸವದಲ್ಲಿ 60ಜಾಗತಿಕ ದಿಗ್ಗಜ ಕಂಪನಿಗಳು ಸೇರಿದಂತೆ ಸುಮಾರು 200ಐಟಿ ಕಂಪನಿಗಳು ಪಾಲ್ಗೊಳ್ಳಲಿವೆ. ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸಲು ಇದು ಪೂರಕ ವೇದಿಕೆ.
ಈ ಬಗ್ಗೆ ಗುರುವಾರ(ಅ.25) ಸುದ್ದಿಗಾರರಿಗೆ ಕರ್ನಾಟಕ ಐಟಿ ಮತ್ತು ಬಿಟಿ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಮಾಹಿತಿ ನೀಡಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಶ್ರೀಲಂಕಾ, ತೈವಾನ್, ಸಿಂಗಪುರ, ಮಲೇಷಿಯಾ, ರಷ್ಯಾ, ಕೊರಿಯಾ, ಜಪಾನ್, ಯುಕೆ ಸೇರಿದಂತೆ 20ದೇಶಗಳಿಂದ ಸಮ್ಮೇಳನಕ್ಕೆ ಅತಿಥಿಗಳು ಆಗಮಿಸಲಿದ್ದಾರೆ.
ಸಾಫ್ಟ್ ವೇರ್, ಟೆಲಿಕಾಂ, ಇ-ಲರ್ನಿಂಗ್, ಹಾರ್ಡ್ ವೇರ್, ಸೆಮಿ ಕಂಡಕ್ಟರ್ ಗೆ ಸಂಬಂಧಿಸಿದ ಚಾವಡಿಗಳು ಐಟಿ ಮೇಳದಲ್ಲಿ ತಲೆ ಎತ್ತಲಿವೆ. ಐಟಿ ರಂಗದ 75 ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮುಖ್ಯಸ್ಥರು ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ ಎಂದು ವಿದ್ಯಾಶಂಕರ್ ಹೇಳಿದರು.
(ಯುಎನ್ಐ)












Click it and Unblock the Notifications