ಚಿತ್ರದುರ್ಗ : ಸ್ವಾಮಿ ಅಗ್ನಿವೇಶ್ ಗೆ ಬಸವಶ್ರೀ ಪುರಸ್ಕಾರ

ಚಿತ್ರದುರ್ಗ : ಸ್ವಾಮಿ ಅಗ್ನಿವೇಶ್ ಗೆ ಬಸವಶ್ರೀ ಪುರಸ್ಕಾರಚಿತ್ರದುರ್ಗ, ಅ.18 : ಪ್ರಸಕ್ತ ಸಾಲಿನ ಪ್ರತಿಷ್ಠಿತ ಬಸವಶ್ರೀ ಪುರಸ್ಕಾರಕ್ಕೆ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗದ ಮುರುಘಾಮಠದಲ್ಲಿ ಅ.22ರಂದು ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ನಡೆಯಲಿದೆ. ಪ್ರಶಸ್ತಿಯು 1 ಲಕ್ಷ ರೂ.ನಗದು ಮತ್ತು ಫಲಕವನ್ನು ಒಳಗೊಂಡಿದೆ. ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಸ್ವಾಮಿ ಅಗ್ನಿವೇಶ್ , ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು.

ಸನ್ಯಾಸಿ, ಹೋರಾಟಗಾರ ಅಗ್ನಿವೇಶ್, ಶೋಷಣೆಮುಕ್ತ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆರೋಗ್ಯವಂತ ಭಾರತ ಕಟ್ಟುವ ಕನಸು ಅವರದು. ಸ್ವಾಮಿ ವಿವೇಕಾನಂದ ಅವರನ್ನು ನೆನಪಿಸುವಂತಹ ವ್ಯಕ್ತಿತ್ವ ಅಗ್ನಿವೇಶ್ ಅವರದು ಎಂದು ಶಿವಮೂರ್ತಿ ಮುರುಘ ಶರಣರು ಅಭಿಪ್ರಾಯಪಟ್ಟಿದ್ದಾರೆ.

ಬಸವಶ್ರೀ ಪ್ರಶಸ್ತಿಯನ್ನು ಈ ಮುಂಚೆ ದಲೈಲಾಮಾ, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಶಬನಾ ಆಜ್ಮಿ ಹಾಗೂ ಗದ್ದರ್ ಅವರಿಗೆ ನೀಡಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+