ಅಪಘಾತ,4ಬಲಿ: ರಾ.ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್
ಬೆಂಗಳೂರು, ಅ.18 : ಪುಣೆ ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಗುರುವಾರ(ಅ.18)ಬೆಳಗ್ಗೆ ಸುಮಾರು ಎರಡು ಮೂರು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾಲಂಗಿ ಸಮೀಪ ಬೆಳಗಿನ ಜಾವ ಸಂಭವಿಸಿದ ಅಪಘಾತವೇ ಟ್ರಾಫಿಕ್ ಜಾಮ್ ಗೆ ಕಾರಣ. ನಿಂತಿದ್ದ ಟ್ರಕ್ ಒಂದಕ್ಕೆ ಈರುಳ್ಳಿ ತುಂಬಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ, ನಾಲ್ವರು ಸಾವನ್ನಪ್ಪಿದ್ದಾರೆ.
ಈರುಳ್ಳಿ ತುಂಬಿದ್ದ ಲಾರಿ ಗದಗದಿಂದ ಬೆಂಗಳೂರಿಗೆ ಹೋಗುತ್ತಿತ್ತು. ಅಪಘಾತದಿಂದಾಗಿ ಲಾರಿಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟರು.ಈರುಳ್ಳು ಮೂಟೆಗಳು ರಸ್ತೆಯಲ್ಲಿ ಬಿದ್ದ ಕಾರಣ, ಟ್ರಾಫಿಕ್ ಜಾಮ್ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
(ಯುಎನ್ಐ)












Click it and Unblock the Notifications