ನಡುಗಿದ ಭೂಮಿ : ಭಯಭೀತರಾದ ದೆಹಲಿ ನಾಗರೀಕರು
ನವದೆಹಲಿ, ಅ.18 : ದೆಹಲಿಯಲ್ಲಿ ಇಂದು ಗುರುವಾರ (18) ಭೂಮಿ ಕಂಪಿಸಿದ ಘಟನೆ ವರದಿಯಾಗಿದೆ. ದೆಹಲಿ ವಾಸಿಗಳಲ್ಲಿ ಆತಂಕ ಮೂಡಿಸಿದ ಕಂಪನ ಯಾವುದೇ ಆಸ್ತಿ, ಪ್ರಾಣನಷ್ಟವನ್ನು ಉಂಟುಮಾಡಿಲ್ಲ.
ಗುರುವಾರ ಬೆಳಗ್ಗೆ 11.30ರ ಸಮಯದಲ್ಲಿ ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.6 ಎಂದು ನಮೂದಾಗೆದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಕೇಂದ್ರವನ್ನು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ನಗರ ವಾಸಿಗಳು ಯಾವ ಕ್ಷಣದಲ್ಲಿ ಏನಾಗುತ್ತದೋ ಎಂದು ಭಯಭೀತರಾಗಿದ್ದಾರೆ.
(ಏಜನ್ಸೀಸ್)












Click it and Unblock the Notifications