ನಗರದಲ್ಲಿ ಮತ್ತೆ ಪತ್ತೆಯಾದ ಬೌಬೌ ಬಿರಿಯಾನಿ!
ಬೆಂಗಳೂರು ನಗರದಲ್ಲಿ ರಾತ್ರಿಯ ಹೊತ್ತು ಕಾಣೆಯಾಗುತ್ತಿರುವ ಬೀದಿ ನಾಯಿಗಳು. ಅಲ್ಲಲ್ಲಿ ಕಂಡುಬರುತ್ತಿರುವ ಅವುಗಳ ಅವಶೇಷಗಳು. ಇದಕ್ಕೆ ಸಂಬಂಧಿಸಿದಂತೆ ಅಶೋಕ್ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಶೋಕ ನಗರ, ಶಾಂತಿನಗರ ಪೋಲೀಸ್ ಠಾಣಾ ವ್ಯಾಪ್ತಿಯ ಕಸದ ತೊಟ್ಟಿಯಲ್ಲಿ ಪತ್ತೆಯಾದ ನಾಯಿಯ ಚರ್ಮ, ಕಾಲು ಹಾಗೂ ಇತರ ಅಂಗಾಂಗಳು ಕಂಡು ಬಂದ ಹಿನ್ನಲೆಯಲ್ಲಿ ನಾಗರೀಕರೊಬ್ಬರು ದೂರು ನೀಡಿದ್ದಾರೆ. ಅಲ್ಲಿನ ವಿದ್ಯಾರ್ಥಿನಿಲಯದ ವಿದೇಶಿ ವಿದ್ಯಾರ್ಥಿಗಳ ಮೇಲೆ ಅನುಮಾನ ಉಂಟಾಗಿ, ಪೊಲೀಸರು ಕೇಸು ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications