ಬೌಬೌ ಬಿರಿಯಾನಿ : ಬೆಂಗಳೂರಿನಲ್ಲೀಗ ಹೊಸ ದಂಧೆ?

Bangalore smells Stray dog Biriyaniಬೆಂಗಳೂರು, ಸೆಪ್ಟೆಂಬರ್, 03 : ನಟ ಜಗ್ಗೇಶ್ ಅಭಿನಯದ ಚಿತ್ರವೊಂದರಲ್ಲಿ ಬೌಬೌ ಬಿರಿಯಾನಿ ಹಾಸ್ಯದ ಸರಕಾಗಿತ್ತು. ಬೌಬೌ ಬಿರಿಯಾನಿ ಎಂದು ನಕ್ಕು ಸುಮ್ಮನಾಗಬಹುದಾಗಿದ್ದ ವಿಚಾರಕ್ಕೆ, ಈಗ ರೆಕ್ಕೆಪುಕ್ಕಗಳು ಬಂದಿವೆ.

ನಗರದಲ್ಲಿ ಬೌಬೌ ಬಿರಿಯಾನಿ ಉಂಟಾ? ಬೌಬೌ ಬಿರಿಯಾನಿ ಹಿಂದಿನ ಜಾಲ ಯಾವುದು? ಈ ಪ್ರಶ್ನೆಗಳು ಪೊಲೀಸರ ಮುಂದಿವೆ. ಬೀದಿನಾಯಿಗಳ ಹತ್ಯೆ ಮಾಡಿ, ಆಹಾರ ತಯಾರಿಸಿದ ಆರೋಪಗಳಿಗೆ ಸಂಬಂಧಿಸಿದಂತೆ, ಶಾಂತಿ ನಗರ ವ್ಯಾಪ್ತಿಯ ಟಿಬೇಟಿಯನ್ ಹಾಸ್ಟೆಲ್ ನತ್ತ ಎಲ್ಲರ ಸಂದೇಹದ ಕಣ್ಣುಗಳು ತಿರುಗಿವೆ.

ಅಶೋಕ್ ನಗರ ಮತ್ತು ಶಾಂತಿ ನಗರ ವ್ಯಾಪ್ತಿಯಲ್ಲಿ ಬೀದಿನಾಯಿಗಳು ದಿಢೀರನೇ ಕಣ್ಮರೆಯಾದ ಬಗ್ಗೆ ಇಲ್ಲಿನ ನಿವಾಸಿಗಳು ದೂರು ನೀಡಿದ್ದಾರೆ. ದೂರಿನನ್ವಯ ಹಾಸ್ಟೆಲ್ ಸಿಬ್ಬಂದಿಯ ವಿಚಾರಣೆ ನಡೆಸಿದ ಪೊಲೀಸರು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಈ ಭಾಗದಲ್ಲಿ ಬೌಬೌ ಬಿರಿಯಾನಿಯ ದಂಧೆ ನಡೆಯುತ್ತಿದೆ ಎಂಬುದಕ್ಕೆ ನಿದರ್ಶನವಾಗಿ, ನಾಯಿಯ ಇತರೆ ಭಾಗಗಳು ಕಸದಬುಟ್ಟಿಯಲ್ಲಿ ಪತ್ತೆಯಾಗಿವೆ. ಹಾಸ್ಟೆಲ್ ಸಿಬ್ಬಂದಿ ನಗರದ ಇತರೆ ಭಾಗಕ್ಕೆ ನಾಯಿ ಮಾಂಸವನ್ನು ಸರಬರಾಜು ಮಾಡುತ್ತಿದ್ದಾರೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+