ತಲೆಗೆ ಕಾಯಿ ಹೊಡೆದುಕೊಳ್ಳುವ ಹರಕೆ ಹೊತ್ತ ಭಕ್ತರು
ಕರೂರ್, ತ.ನಾಡು, ಆಗಸ್ಟ್ 04 : ಕುಟ್ಟುತ್ತಿದ್ದ ತೆಂಗಿನಕಾಯಿ ತಲೆಯಲ್ಲಿ ರಕ್ತ ಚಿಮ್ಮಿಸುತ್ತಿದ್ದರೂ ಧೃತಿಗೆಡದೆ ಸಾವಿರಾರು ಭಕ್ತರು ಕಾಯಿಗೆ ತಲೆ ಒಡ್ಡಿನಿಂತಿದ್ದರು.
ತಮ್ಮ ಹರಕೆ ಪೂರೈಕೆಗಾಗಿ ಆದಿ ಪುರುಕ್ಕು ಉತ್ಸವದ ಸಂದರ್ಭದಲ್ಲಿ ಇಲ್ಲಿನ ಮಹಾಲಕ್ಷ್ಮಿ ಅಮ್ಮನ್ ದೇವಸ್ಥಾನದ ಮುಂದೆ ಸಮೂಹ ಸನ್ನಿಗೆ ಒಳಗಾದಂತೆ ಸಾವಿರಾರು ಭಕ್ತರು ಶನಿವಾರ ನೆರೆದಿದ್ದರು. ಭಕ್ತರಲ್ಲಿ ಬಹುಪಾಲು ಮಹಿಳೆಯರದು.
ದೇವಸ್ಥಾನದ ಅರ್ಚಕ ಭಕ್ತರ ತಲೆಗೆ ಕಾಯಿ ಹೊಡೆಯುತ್ತಿದ್ದಂತೆ ಅನೇಕರ ತಲೆಯಿಂದ ರಕ್ತ ಚಿಮ್ಮಿತು. ದೇವಸ್ಥನಾದ ಸಂಪ್ರದಾಯದಂತೆ ಅರ್ಚಕ ಅವರ ಗಾಯಗೊಂಡ ತಲೆಗೆ ಅರಿಸಿನ ಪುಡಿ ಹಚ್ಚುತ್ತಿದ್ದ.
ನಂತರ ಒಡೆದ ತೆಂಗಿನ ಕಾಯಿ ಚೂರುಗಳನ್ನು ಪ್ರಸಾದದ ರೂಪದಲ್ಲಿ ಭಕ್ತಗಣಕ್ಕೆ ಹಂಚಲಾಯಿತು.
ಹರಕೆ ಪೂರೈಕೆಗಾಗಿ ಪುಟ್ಟ ಮಕ್ಕಳನ್ನು ಒಂದು ನಿಮಿಷದ ಕಾಲ ನೆಲದಲ್ಲಿ ಪೂರ್ತಿ ಹೂತು ನಂತರ ತೆಗೆಯುವ ಸಂಪ್ರದಾಯ ಮಧುರೈ ಬಳಿ ಚಾಲ್ತಿಯಲ್ಲಿದೆ.
(ಯುಎನ್ಐ)












Click it and Unblock the Notifications