ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಭಾಷೆಯಲ್ಲಿ "ಹುಡುಕಾಟ" ಇನ್ನಷ್ಟು ಸುಲಭ

By ಬಿ.ಜಿ.ಮಹೇಶ್
|
Google Oneindia Kannada News

An exclusive interview Anurag
ಅಂತರ್ಜಾಲದ ಅಪಾರ ಸಾಧ್ಯತೆಗಳನ್ನು ಕೈಗೆಟಕುವಂತೆ ಮಾಡುತ್ತಿರುವ ಗುರೂಜಿ.ಕಾಂ ಸಿಇಓ ಅನುರಾಗ್ ದಾಡ್ ಜತೆ ಒನ್ ಇಂಡಿಯಾ ಸಂಸ್ಥೆ ಯ ಸಿಇಓ ನ‌ಡೆಸಿದ ವಿಶೇಷ ಸಂದರ್ಶನ. ಅಂತರ್ಜಾಲದಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ತಿಳಿಯಬೇಕಾದರೆ, ಸರ್ಚ್ ಇಂಜಿನ್ ನೊಂದಿಗೆ ಹುಡುಕುವಿಕೆ ಶುರುವಾಗುತ್ತದೆ. ಆದರೆ ನಮ್ಮ ಹುಡುಕಾಟ ವಿಷಯವನ್ನು ಮರೆಸುವಂತೆ ಸರ್ಚ್ ಇಂಜಿನ್ ಗಳು ಫಲಿತಾಂಶ ನೀಡುವುದು ಸಾಮಾನ್ಯ ಸಂಗತಿಯಾಗಿದೆ. ತಾಂತ್ರಿಕವಾಗಿ ಸರ್ಚ್ ಇಂಜಿನ್ ನೀಡುವ ಫಲಿತಾಂಶ ಪೂರಕವಾಗಿದ್ದರೂ, ಅನೇಕ ಅನಾವಶ್ಯಕ, ಸಂಬಂಧಪಡದ ಫಲಿತಾಂಶಗಳು ಸಿಗುತ್ತವೆ.

ಐ ಕ್ಯೂಬ್ ಸಮಿಕ್ಷೆಯ ಪ್ರಕಾರ ಅಂತರ್ಜಾಲದಲ್ಲಿ ಈ ಮೇಲ್ ಬಳಸುವವರ ನಂತರದ ಸ್ಥಾನ ಹುಡುಕುವಿಕೆ(Searching)ಗೆ ಸಲ್ಲುತ್ತದೆ.ಶೇ. 40ರಷ್ಟು ಜನ ಈ ಮೇಲ್ ಬಳಕೆ ಹಾಗೂ ಶೇ. 10ರಷ್ಟು ಜನ ಚಾಟಿಂಗ್ ನಲ್ಲಿ ವ್ಯಸ್ತರಾಗಿರುವುದು ಕಂಡು ಬಂದಿದೆ. ಅಂತರ್ಜಾಲ ಏನನ್ನಾದರು ಹುಡುಕುವ ಶೇ ೩೩ರಷ್ಟು ಜನ ಹುಡುಕು ಪದ(Search queries) ವನ್ನು ಸೂಚಿಸುವುದು ಹಾಗೂ ಶೇ, 90ರಷ್ಟು ಜನ ಸ್ಥಳೀಯ ಆದ್ಯತೆಯ ಆಧಾರ ಮೇಲೆ ಹುಡುಕುತ್ತಾರೆ ಎಂಬುದು ಗಣನೀಯ ಸಂಗತಿ.

ದೇಸಿ ತಂತ್ರಜ್ಞಾನದ ಆಧಾರ ಮೇಲೆ ಸ್ಥಳೀಯ ಆದ್ಯತೆಗಳನ್ನು ಪ್ರತಿ ಬಿಂಬಿಸುವ ಅಗತ್ಯ ಇಂದು ಹೆಚ್ಚಾಗಿದ್ದು. ಈ ನಿಟ್ಟಿನಲ್ಲಿ ಗುರೂಜಿ.ಕಾಂ ಎಂಬ ದೇಸಿ ಸಂಸ್ಥೆ ಗೂಗಲ್ ಗೆ ಪ್ರತಿಸ್ಪರ್ಧಿಯಾಗಿ ನಿಂತಿದೆ. ಕೇವಲ ಭಾರತದ ಅಂತರ್ಜಾಲ ಪುಟಗಳನ್ನು ತಡಕುತ್ತಾ, ಸ್ಥಳೀಯ ತಾಣಗಳಿಗೆ ಆದ್ಯತೆ ನೀಡುತ್ತಾ, ನಿಖರ ಫಲಿತಾಂಶಗಳನ್ನು ನೀಡುತ್ತಿದೆ. ಭಾರತೀಯತೆಯ ಸಂಕೇತ ತಾಣಗಳನ್ನು ವಿಶ್ವಕ್ಕೆ ಪರಿಚಯ ಮಾಡುತ್ತಿದೆ.

ಒನ್ ಇಂಡಿಯಾ ಕೂಡ ವಿಷಯಾಧಾರಿತ ಭಾರತದ ತಾಣಗಳ ಪಟ್ಟಿಯನ್ನು ಬಹು ಹಿಂದಿನಿಂದ explore.oneindia.in ನಲ್ಲಿ ನೀಡುತ್ತಾ ಬಂದಿದೆ.

ಗುರೂಜಿ.ಕಾಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಅನುರಾಗ್ ದಾಡ್ ಜತೆ ಒನ್ ಇಂಡಿಯಾದ ಸಿಇಓ ಬಿ.ಜಿ. ಮಹೇಶ್ ನಡೆಸಿದ ಸಂದರ್ಶನ ಅಂತರ್ಜಾಲ ತಾಣ ಹಾಗೂ ಭಾಷಾಧಾರಿತ ವೆಬ್ ಸೈಟ್ ಗಳ ಹಲವು ತಾಂತ್ರಿಕ ಸಾಧತ್ಯೆ-ಭಾಧ್ಯತೆಗಳನ್ನು ಹೊರಗೆಡವಿದೆ.

ಸಂದರ್ಶನ ಸಾರಾಂಶ ಇಲ್ಲಿದೆ:

ಬಿ.ಜಿ- ಭಾರತದಲ್ಲಿ ಸ್ಥಳೀಯ ಆಧಾರಿತ ಸರ್ಚ್ ಇಂಜಿನ್ ಗೆ ಬೇಡಿಕೆ ಹೆಚ್ಚುತ್ತಿದೆ ಎಂಬ ಸುದ್ದಿಯಿದೆ? ಗುರೂಜಿ.ಕಾಂ ಈ ನಿಟ್ಟಿನಲ್ಲಿ ಕಾರ್ಯಗತವಾಗಿರುವುದರಿಂದ ಯಾವ ರೀತಿ ಮಾನ್ಯತೆ ಸಿಕ್ಕಿದೆ?

ಅನುರಾಗ್- ವೆಬ್ ಅನ್ವಯ ತಂತ್ರಾಶಗಳಲ್ಲಿ ಸರ್ಚ್ ಇಂಜಿನ್ ಪ್ರಮುಖವಾದುದು. ಜನ ಹುಡುಕುವಾಗ ಹೆಚ್ಚಿನ ನಿಖರತೆ ಹಾಗೂ ಸಂಬಂಧಿತ ಫಲಿತಾಂಶವನ್ನು ಕಾಣಲು ಬಯಸುತ್ತಾರೆ. ಭಾರತೀಯರಲ್ಲಿ ಅನೇಕರು ವಿಲಕ್ಷಣವಾದ ವಿಷಯಗಳನ್ನು ಹುಡುಕುವುದು ಕಂಡು ಬಂದಿದೆ. ಅನನ್ಯ ವ್ಯಕ್ತಿತ್ವದ ಈ ಜನರ ಹುಡುಕಕ್ಕೆ ಪೂರಕ ಮಾಹಿತಿ ಒದಗಿಸುವತ್ತ ಸುಧಾರಣೆಗಳನ್ನು ನಡೆದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಗುರೂಜಿ,ಕಾಂ ವಿಶಿಷ್ಟವಾದ ಗ್ರಾಹಕರನ್ನು ಹೊಂದಿದೆ ಎಂದು ಹೇಳಬಹುದು.

ಬಿ.ಜಿ- ಪ್ರಶ್ನೆ-ಗುರೂಜಿ ಜ್ಞಾನ್ ಶುರುವಾದ ಬಗೆ ಹೇಗೆ? ಯಾವ ರೀತಿಯ ವೀಕ್ಷಕರನ್ನು ಗುರೂಜಿ ಜ್ಞಾನ್ ಹೊಂದಿದೆ?

ಅನುರಾಗ್- ಭಾರತ ಬಲ್ಲ ಗುರೂಜಿ.ಕಾಂ ಎಂಬ ತತ್ವದ ಆಧಾರದ ಮೇಲೆ ಗುರೂಜಿ ಜ್ಞಾನ್ ಮುಖಾಂತರ ಭಾರತದ ಬಗೆಗಿನ ಹಲವು ಕುತೂಹಲ ಮಾಹಿತಿಗಳನ್ನು ನೀಡುತ್ತಿದ್ದೇವೆ. ಭಾರತದ ಅಂತರ್ಜಾಲ ಗ್ರಾಹಕರ ಅಗತ್ಯತೆಗೆ ಪೂರಕವಾದ ಮಾಹಿತಿಗಳನ್ನು ಒದಗಿಸುತ್ತಾ ಸಾಗಿದ್ದೇವೆ. ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಗುರೂಜಿ ಜ್ಞಾನ್ ಮುಖಾಂತರ ಜ್ಞಾನ ವೃದ್ಧಿ ಹೆಚ್ಚಿಸುವುದು ನಮ್ಮ ಉದ್ದೇಶ.

ಬಿ.ಜಿ- ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳ ಬಳಕೆ ಹಿಂದಿಗಿಂತ ಈಗ ಹೆಚ್ಚಾಗುತ್ತಿದ್ದು, ಭಾಷಾಧಾರಿತ ಸರ್ಚ್ ಇಂಜಿನ್ ಶುರು ಮಾಡಿದ ಮೊದಲಿಗರಲ್ಲಿ ಗುರೂಜಿ.ಕಾಂ ಕೂಡ ಒಂದು ಎಂದು ತಿಳಿದು ಬಂದಿದೆ. ಭಾಷಾಧಾರಿತ ಹುಡುಕುವಿಕೆಯ ಹಿನ್ನೆಲೆಯನ್ನು ಹಾಗೂ ಅದರ ಮುಂದಿನ ಭವಿಷ್ಯದ ಬಗ್ಗೆ ತಿಳಿಸಿ?

ಅನುರಾಗ್- ಇಂಗ್ಲೀಷನ್ನು ಹೊರತುಪಡಿಸಿ ಹಿಂದಿ, ತಮಿಳು, ಮಲಯಾಳಂ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸದ್ಯಕ್ಕೆ ಗುರೂಜಿ.ಕಾಂ ಕಾರ್ಯ ನಿರ್ವಹಿಸಬಲ್ಲದಾಗಿದೆ. ದೇಸಿ ಭಾಷೆಯಲ್ಲಿ ಸರ್ಚ್ ಮಾಡುವವರಿಗೆ ಅನುಕೂಲಕರ ಸಾಧನಗಳನ್ನು ನೀಡಲಾಗಿದೆ. ವೀಕ್ಷಕರು ಹುಡುಕು ಪದವನ್ನು ಉಚ್ಚಾರಣಾನುರೂಪವಾಗಿರುವ(phonetically) ರೀತಿಯಲ್ಲಿ ಸೂಚಿಸಬಹುದು.ಅಥವಾ ಆನ್ ಸ್ಕ್ರೀನ್ ವರ್ಚುಯಲ್ ಕೀ ಬೋರ್ಡ್ ಬಳಸಿ ಹುಡುಕು ಪದ(search query) ವನ್ನು ಟೈಪ್ ಮಾಡಬಹುದು. ಗ್ರಾಹಕರಿಗೆ ಅನುಕೂಲವಾಗಲೆಂದು ಪದ ಪರೀಕ್ಷಕ(vernacular spell check) ವನ್ನು ನೀಡಲಾಗಿದೆ. ಇದು ಬೇರೆ ಸರ್ಚ್ ಇಂಜಿನ್ ಗಳಿಗೆ ಹೋಲಿಸಿದರೆ ವಿಶಿಷ್ಟ ಎಂದು ಹೇಳಬಹುದು.

ಅಂತರ್ಜಾಲವನ್ನು ಸಹ ಪ್ರಭಾವಿ ಸಮೂಹ ಮಾಧ್ಯಮ (mass medium) ಎಂದು ನಾನು ಪರಿಗಣಿಸುತ್ತೇನೆ.ಭಾರತದ ದೇಸಿ ಭಾಷೆಗಳ ಆಧಾರಿತ ವೆಬ್ ಸೈಟ್ ಗಳ ಬೇಡಿಕೆ ಹೆಚ್ಚುತ್ತಿದೆ. ವೆಬ್ ದುನಿಯಾದ ಸಮೀಕ್ಷೆ ಪ್ರಕಾರ ಶೇ. ೪೬ರಷ್ಟು ಜನ ತಮ್ಮ ಮಾತೃಭಾಷೆಯಲ್ಲೇ ವಿಷಯಗಳನ್ನು ಹುಡುಕುತ್ತಾರೆ ಹಾಗೂ ಮಾಹಿತಿ ಸಂಗ್ರಹಿಸುತ್ತಾರೆ. ಈ ನಿಟ್ಟಿನಲ್ಲಿ ನಮ್ಮದು ಉತ್ತಮ ಬೆಳವಣಿಗೆ ಎನ್ನಬಹುದು.

ಬಿ.ಜಿ. - ಒನ್ ಇಂಡಿಯಾ ಸಂಸ್ಥೆಯ ಅಂತರ್ಜಾಲ ತಾಣಗಳನ್ನು ಇತ್ತೀಚೆಗೆ ಯೂನಿಕೋಡ್ ಅವೃತ್ತಿಗೆ ಬದಲಿಸಲಾಯಿತು.ಈ ಮೊದಲಿನ ಲಿಪಿ(fonts)ಗಳನ್ನು ಬಳಸಿದಾಗ ಸರ್ಚ್ ಇಂಜಿನ್ ಗಳಿಗೆ ಅನುಕೂಲಕರವೇ ಅಥವಾ ಗುರೂಜಿ.ಕಾಂ ಯುನಿಕೋಡ್ ಲಿಪಿ ಬಳಕೆಯನ್ನು ಹೆಚ್ಚು ಅನುಮೋದಿಸುತ್ತದೆಯೇ?

ಅನುರಾಗ್- ಭಾಷಾ ಸಂಕೇತಿಕರಣ(standardization of Indian language encoding)ದಲ್ಲಿ ನಿಶ್ಚಿತವಾದ ನಿಯಮಾವಳಿ ಬಳಸದಿರುವುದು ಭಾರತದ ಭಾಷಾಧಾರಿತ ವೆಬ್ ಸೈಟ್ ನಲ್ಲಿ ಕಂಡು ಬರುವ ಪ್ರಮುಖವಾದ ನ್ಯೂನತೆ. ಭಾರತದ ಅನೇಕ ವೆಬ್ ಸೈಟ್ ಗಳು ಇನ್ನೂ ಯುನಿಕೋಡ್ ಗೆ ಬದಲಾಗಿಲ್ಲ.ಇದಕ್ಕೆ ಪರಿಹಾರವಾಗಿ ಗುರೂಜಿ.ಕಾಂ ಅಭಿವೃದ್ಧಿಪಡಿಸಿದ ತಂತ್ರಜ್ಞಾನದ ಮುಖಾಂತರ ಯುನಿಕೋಡ್ ಅಲ್ಲದ ಲಿಪಿಗಳನ್ನು ಯುನಿಕೋಡ್ ಗೆ ಬದಲಾಯಿಸಬಹುದು. ಇದರಿಂದ ಗುರೂಜಿ.ಕಾಂನಲ್ಲಿ ಹುಡುಕುವಿಕೆ ಸುಲಭವಾಗಲಿದೆ.

ಬಿ.ಜಿ. - ಭಾರತದ ಯಾವ ಭಾಷೆ ಗುರೂಜಿ ಯಲ್ಲಿ ಟಾಪ್ ಸರ್ಚ್ ಎನಿಸಿದೆ?

ಅನುರಾಗ್- ಮಾಹಿತಿ ಹುಡುಕುವಿಕೆ , ಲಭ್ಯತೆ ಹಾಗೂ ಗ್ರಾಹಕರ ವೀಕ್ಷಣೆಯ ಆಧಾರಿದ ಮೇಲೆ ಹಿಂದಿ ಭಾಷೆಯನ್ನು ಟಾಪ್ ಸರ್ಚ್ ಎನ್ನಬಹುದು. ಉಳಿದಂತೆ ತಮಿಳು ಹಾಗೂ ತೆಲುಗು ಉತ್ತಮ ಪೈಪೋಟಿಯಲ್ಲಿವೆ.

ಬಿ.ಜಿ- ಭಾರತೀಯ ಭಾಷಾ ವೆಬ್ ಸೈಟ್ ಗಳನ್ನು ಹುಡುಕುವಾಗ(crawling) ನಿಮಗೆ(ಗುರೂಜಿ,ಕಾಂ ಗೆ) ಎದುರಾದ ತಾಂತ್ರಿಕ ಸವಾಲುಗಳೇನು?

ಅನುರಾಗ್ -ಮೊದಲೇ ಹೇಳಿದಂತೆ ನಿಶ್ಚಿತವಾದ ಲಿಪಿ ಬಳಕೆ ಮಾಡದಿರುವುದು ಭಾರತ ಭಾಷಾಧಾರಿತ ವೆಬ್ ಸೈಟ್ ಗಳನ್ನು ಹುಡುಕುವಾಗ ಮುಖ್ಯವಾಗಿ ಎದುರಾಗುವ ಸಮಸ್ಯೆ. ಭಾಷಾ ಸಂಕೇತಿಕರಣಕ್ಕೆ ಸರಿಯಾದ ನಿಯಮ ರೂಪಿಸಿ, ಭಾಷಾ ತಾಣಗಳನ್ನು ಸರ್ಚ್ ಮಾಡುವ ರೀತಿ ಮಾಡಲಾಗುವುದು.ಇದಲ್ಲದೆ, ಸರ್ಚ್ ಮಾಡಿದ ವಿಷಯದ ಮೇಲೆ ಪರಿವಿಡಿ ತಯಾರಿಕೆ(Indexing) ಹಾಗೂ ಮುಂದಿನ ಸರ್ಚ್ ಪದಕ್ಕಾಗಿ ಪ್ರಶ್ನಿಸುವುದು(query input) ಮುಂತಾದ ಗುರುತರ ಸಮಸ್ಯೆಗಳಿವೆ. ನಾವು ಉಚ್ಚಾರಣಾನುರೂಪವಾಗಿರುವ(phonetically) ರೀತಿಯನ್ನೇ ಮುಂದುವರಿಸುತ್ತೇವೆ. ಇದು ಗ್ರಾಹಕರಿಗೂ ಅನುಕೂಲ.

ಬಿ.ಜಿ- ಹೈದರಾಬಾದಿನ ಟಿಸಿಎಸ್ ಸಂಸ್ಥೆಯನ್ನು ಹೊರತು ಪಡಿಸಿದರೆ, ಯುನಿಕೋಡ್ ಲಿಪಿ(Unicode fonts)ಗಳ ಮೇಲೆ ಬಂಡವಾಳ ಹೂಡಿ ಅಭಿವೃದ್ಧಿಪಡಿಸಲು ಪ್ರಾಯಶಃ ಯಾರು ಮುಂದೆ ಬಂದಿಲ್ಲವೆಂದು ಕಾಣುತ್ತದೆ.ಭಾರತ ಸರ್ಕಾರ /ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಿಮಗನ್ನಿಸಿಯೇ?

ಅನುರಾಗ್- ಭಾರತೀಯ ಭಾಷಾಧಾರಿತ ಅಂತರ್ಜಾಲ ತಾಣಗಳನ್ನು ಭಾರತ ಸರ್ಕಾರ ಪ್ರೋತ್ಸಾಹಿಸುವುದು ಅವಶ್ಯಕವಾಗಿದೆ. ಇದಕ್ಕಿಂತ ಮುಖ್ಯವಾಗಿ, ಒಂದು ನಿಶ್ಚಿತವಾದ ಭಾಷಾ ಸಂಕೇತಿಕರಣ(standardization of Indian language encoding) ರೂಪಿಸುವುದು ಅಗತ್ಯವಾಗಿದೆ. ಭಾಷಾ ಲಿಪಿಗಳ ಅಭಿವೃದ್ಧಿಯ ಕಡೆಗೆ ಸರ್ಕಾರ ಗಮನ ಹರಿಸುವುದು ಒಳಿತು.

ಬಿ .ಜಿ.-ವೆಬ್ ಮಾಸ್ಟರ್ ಗಳು ಸೈಟ್ ಮ್ಯಾಪ್ ಸಲ್ಲಿಸುವಿಕೆಯನ್ನು ಮಾಡುವ ಬದಲು http://www.sitemaps.org/ ಅನುಮೋದಿತ ಸೈಟ್ ಮ್ಯಾಪ್ ಪ್ರೋಟೋಕಾಲ್ ಬಳಕೆ ಮಾಡುವ ಬಗ್ಗೆ ಗೂಗಲ್, ಯಾಹೂ ಹಾಗೂ ಎಂಎಸ್ಎನ್ ಇತ್ತೀಚೆಗೆ ಒಪ್ಪಿಗೆ ಸೂಚಿಸಿದೆ. ಗುರೂಜಿ.ಕಾಂ ಕೂಡ ಈ ಪ್ರತಿಷ್ಠಿತ ಸಾಲಿಗೆ ಸೇರಲಿದೆಯೇ?
ಅನುರಾಗ್- ಖಂಡಿತಾ. ಗುರೂಜಿ.ಕಾಂ ಇನ್ನು ಮೂರು ತಿಂಗಳಲ್ಲಿ ಈ ಮಾದರಿಯನ್ನು ಅಳವಡಿಸಿಕೊಳ್ಳಲಿದೆ.

ಬಿ.ಜಿ. - ಗುರೂಜಿಯಲ್ಲಿ ನೀಡಲಾಗಿರುವ ನಗರಗಳ ಆಧಾರಿತ ಸರ್ಚ್ ಈಗಾಗಲೇ ಪ್ರಚಲಿತವಿರುವ ಜಸ್ಟ್ ಡಯಲ್.ಕಾಂ ಹಾಗೂ ಐಲಾಕಾ,ಇನ್ ಗಳಿಗಿಂತ ಹೇಗೆ ಭಿನ್ನ?

ಅನುರಾಗ್- ಈಗ ಪ್ರಚಲಿತ ಇತರೆ ಸ್ಥಳೀಯ ಸರ್ಚ್ ಇಂಜಿನ್ ಸೌಲಭ್ಯಗಳಲ್ಲಿ ವ್ಯಾಪಾರಾಧಾರಿತ ಮಾಹಿತಿಗಳ ಪಟ್ಟಿ (local business listing information)ದೊರೆಯುತ್ತಿದೆ ನಮ್ಮಲ್ಲಿ ಇದಕ್ಕಿಂತ ಹೆಚ್ಚಿನ ಮಾಹಿತಿ ಹಾಗೂ ವಿಸ್ತಾರವಾದ ವಿಷಯಗಳನ್ನು ತಂತ್ರಜ್ಞಾನ ಆಧಾರಿತವಾಗಿ ಹುಡುಕಲಾಗುತ್ತದೆ. ಇದರಿಂದ ಹೆಚ್ಚಿನ ಫಲಿತಾಂಶವನ್ನು ಪಡೆಯಬಹುದಾಗಿದೆ.

ಬಿ.ಜಿ. - ಗೂಗಲ್ ಮಾದರಿಯಲ್ಲೇ ಗುರೂಜಿ ಕೂಡ ಬೀಟಾ ಲೆಬಲ್ ಹಾಕಿಕೊಂಡಿದೆ. ನಿಮ್ಮ ಉತ್ಪನ್ನ(non-Beta version)ವನ್ನು ಯಾವ ನಿರೀಕ್ಷಿಸಬಹುದು?

ಅನುರಾಗ್- ಅಂತರ್ಜಾಲದಲ್ಲಿ ಲಭ್ಯವಿರುವ ಇತರೆ ಉತ್ಪನ್ನಗಳಂತೆ ನಮ್ಮ ಉತ್ಪನ್ನ(ತಂತ್ರಾಂಶ)ಕ್ಕೂ ಬೀಟಾ ಲೆಬಲ್ ಹಾಕಲಾಗಿದೆ. ವರ್ಷಾಂತ್ಯದಲ್ಲಿ ಮುಂದಿನ ನಾನ್ ಬೀಟಾ ಅವೃತ್ತಿಯನ್ನು ಕಾಣಬಹುದಾಗಿದೆ.

ಬಿ.ಜಿ- SEO(Search Engine Optimization) ಹಾಗೂ ಸರ್ಚ್ ಇಂಜಿನ್ ದೊರೆಯುವ ಟ್ರಾಫಿಕ್ ಬಗ್ಗೆ ವೆಬ್ ಮಾಸ್ಟರ್ ಗಳು ಕಾಳಜಿವಹಿಸುತ್ತಾರೆ. SEO(Search Engine Optimization) ಗೆ ಅನುಕೂಲಕರ ರೀತಿಯಲ್ಲಿ ಸೈಟ್ ವಿನ್ಯಾಸದ ಬಗ್ಗೆ ಗೂಗಲ್ ಹಾಗೂ ಯಾಹೂ ಪ್ರಸ್ತಾಪಿಸಿವೆ. ಈ ಬಗ್ಗೆ ಗುರೂಜಿ.ಕಾಂ ನಿಂದ ಪ್ರಸ್ತಾಪ ಆಗಿಲ್ಲ. ಭಾರತೀಯ ತಾಣಗಳ ವಿಷಯಕ್ಕೆ ಬಂದರೆ, ಗುರೂಜಿಯ ಪಟ್ಟಿಯಲ್ಲಿ ನಮ್ಮ ವೆಬ್ ಸೈಟ್ ಲಿಂಕ್ ಟಾಪ್ ಸ್ಥಾನದಲ್ಲಿರಬೇಕು ಎಂದು ದೇಸಿ ತಾಣಗಳು ಹೇಳಬೇಕಾದರೆ, ಗುರೂಜಿ ಕೂಡ SEO ಬಗ್ಗೆ ಯಾವ ರೀತಿ ನಿಲುವು ಹೊಂದಿದೆ?

ಅನುರಾಗ್- ಉತ್ತಮ ಪ್ರಶ್ನೆಯನ್ನು ಕೇಳಿದ್ದೀರಾ.ಸದ್ಯಕ್ಕೆ ನಾವು ನಮ್ಮ ಉತ್ಪನ್ನವನ್ನು ಅಭಿವೃದ್ಧಿಪಡಿಸಿ, ಎಲ್ಲಾ ಸ್ತರದ ಗ್ರಾಹಕರನ್ನು ತಲುಪುವತ್ತ ಯೋಜನೆ ಹಾಕಿದ್ದೇವೆ. ನಮ್ಮ ಪ್ರಮುಖ ಆಸಕ್ತಿಕರ ವಿಷಯಗಳಲ್ಲಿ ವೆಬ್ ಮಾಸ್ಟರ್ ಸಮೂಹ(Webmaster community) ಕೂಡ ಒಂದು. ಪ್ರರಸ್ಪರ ಹೊಂದಾಣಿಕೆ ಹಾಗೂ ವಿನಿಯಮದ ಬಗ್ಗೆ ಗಮನ ಹರಿಸಲಾಗುವುದು. SEO ಬಳಕೆ ಬಗ್ಗೆ ಕೂಡ ಪ್ರಸ್ತಾಪ ಮಾಡಲಾಅಗುವುದು.

ಬಿ.ಜಿ. - NIC(National Information Centre) ಸರ್ಕಾರಿ ವೆಬ್ ಸೈಟ್ ಗಳಲ್ಲಿ ಸರ್ಚ್ ಮಾಡಲು ಅನುಕೂಲಕರ ವಿಧಾನ ಅಳವಡಿಕೆ ಮಾಡಲು ಯಾಹೂ ಹಾಗೂ ಗೂಗಲ್ ಸಂಸ್ಥೆಯೊಡನೆ ಕೈ ಜೋಡಿಸುವ ಬಗ್ಗೆ ಸುದ್ದಿ ಬಂದಿದೆ. ಭಾರತ ಸರ್ಕಾರ ಗುರೂಜಿ.ಕಾಂ ಅನ್ನು ನಿರಾಕರಿಸಿದೆಯೇ?

ಅನುರಾಗ್- ಇಲ್ಲ. ಈ ಬಗ್ಗೆ NIC ಜೊತೆ ಮಾತುಕತೆ ನಡೆಯುತ್ತಿದ್ದು, ಅವರ ಅಗತ್ಯತೆಗಳನ್ನು ಮನವರಿಕೆ ಮಾಡಿಕೊಳ್ಳಲಾಗಿದೆ.

ಬಿ.ಜಿ- Domain parking(ಹಳೆಯದಾದ ಅಥವಾ ಪರಿಷ್ಕೃತಗೊಳ್ಳದ ಡೊಮೈನ್ ಹೆಸರುಗಳ ಪಟ್ಟಿ ಇರುತ್ತದೆ. ಡೊಮೈನ್ ಬಗ್ಗೆ ಜಾಹೀರಾತು ನೀಡುವ ವಿಧಾನ)ಮುಖಾಂತರ ವ್ಯಾಪಾರ ಹೆಚ್ಚಾಗುತ್ತಿರುವುದು ನಿಮಗೆ ಗೊತ್ತಿರಬೇಕು. ಹೀಗೆ ನಾನು ಸುಭಿಕ್ಷಾ ಬಗ್ಗೆ ಒಂದು ಲೇಖನವನ್ನು ಗೂಗಲ್ ಹಾಗೂ ಗುರೂಜಿಯಲ್ಲಿ ಹುಡುಕ ತೊಡಗಿದೆ. ಸಿಕ್ಕ ಫಲಿತಾಂಶ ಸಾಮ್ಯತೆಯಿರಲಿಲ್ಲ(ನಿರೀಕ್ಷೆಯಂತೆ). ಆದರೆ ಗುರೂಜಿ.ಕಾಂನಲ್ಲಿ ಕಂಡ ಮೊದಲ ಲಿಂಕ್ ಸುಭಿಕ್ಷಾ ಮಳಿಗೆಗೆ ಸಂಬಂಧಪಡದೇ domain squatter (ಪ್ರಚಲಿತ ಕಂಪೆನಿಯ ಹೆಸರಿನಲ್ಲಿ ಬೇನಾಮಿಯೊಬ್ಬ ಡೊಮೈನ್ ಖರೀದಿಸಿ. ಕಂಪೆನಿ ಬ್ರಾಂಡ್ ನೇಮ್ ಹೆಸರಿನಲ್ಲಿ ವೆಬ್ ಸೈಟ್ ಹೊಂದುವವರು. ಆನಂತರ ಕಂಪೆನಿ ಬಯಸಿದರೆ ಡೊಮೈನ್ ಹಸ್ತಾಂತರಿಸಲು ಹಣ ಕೀಳುವವರು)ಗಳಿಗೆ ಸಂಬಂಧಿಸಿದ್ದಾಗಿತ್ತು. ಈ ರೀತಿಯ ದೋಷಗಳನ್ನು ಸರಿಪಡಿಸಲು ಸಾಧ್ಯವಿಲ್ಲವೇ?

ಅನುರಾಗ್- ಮೊದಲಿಗೆ ನ್ಯೂನತೆಯನ್ನು ತೋರಿಸಿದ್ದಕ್ಕೆ ಧನ್ಯವಾದಾಗಗಳು, ನಾವು ಖಂಡಿತಾ ಸರಿಪಡಿಸುತ್ತೇವೆ. ನೀವು ಹೇಳಿದಂತೆ Domain parking ದೊಡ್ಡ ಉದ್ಯಮವಾಗುತ್ತಿದೆ. ಇದರಲ್ಲಿ ಹೆಚ್ಚಿನದವು ಮುಂಚೆ ಪ್ರಚಲಿತವಿದ್ದ ಡೊಮೈನ್ ಗಳಾಗಿದ್ದು, ಈ ಅವನತಿ ಕಂಡಿರುತ್ತವೆ. ಆದ್ದರಿಂದ ಗುರುತಿಸುವುದು ಸ್ವಲ್ಪ ಕಷ್ಟವಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಹುಡುಕುವಿಕೆಯ ಆಧಾರದ ಮೇಲೆ ಅವುಗಳನ್ನು ಕೆಳದರ್ಜೆಗೆ ಸೇರಿಸುವುದು ಅಥವಾ ನಿರ್ಬಂಧ ಹೇರುವ ಬಗ್ಗೆ ಚಿಂತನೆ ನಡೆದಿದೆ.

ಬಿ.ಜಿ- ಗೂಗಲ್ ರೀತಿಯಲ್ಲಿ ಸೈಟ್ ಗಳನ್ನು ನಿಷೇಧಿಸುತ್ತೀರಾ? ಹೌದು ಅನ್ನುವುದಾದರೆ, ಹೇಗೆ ಕಾರ್ಯಗತಗೊಳೀಸುತ್ತೀರಾ?

ಅನುರಾಗ್- ಹೌದು. ಮೌಲ್ಯಯುಕ್ತವಾದ ಮಾಹಿತಿಯನ್ನು ನೀಡದ ತಾಣಗಳನ್ನು ನಿಷೇಧಿಸುತ್ತೇವೆ. ಈ ರೀತಿ ಶೇಖರಿತವಾದ ವೆಬ್ ಸೈಟ್ ಗಳ ಪರಿವಿಡಿ(Index) ತಯಾರಿಸಿ, ನಿಷೇಧಿತ ತಾಣಗಳ ಪಟ್ಟಿ (Block list) ಮಾಡುತ್ತೇವೆ. ವೆಬ್ ಸೈಟ್ search engine optimization ಹೆಚ್ಚಿಸಲು reciprocal linking, cloaking, parked domains, keyword stuffing ಮುಂತಾದ ವಾಮಮಾರ್ಗ ಅನುಸರಿಸುವ ವೆಬ್ ಸೈಟ್ ಗಳನ್ನು ನಿಷೇಧಿಸುತ್ತವೆ.

ಬಿ.ಜಿ- B ಸರಣಿಯನ್ನು ಸುಧಾರಣೆಗೊಳಿಸಲು ಯಾವ ಯೋಜನೆ ಹಾಕಿಕೊಂಡಿದ್ದೀರಾ?

ಅನುರಾಗ್- ಮುಂಬರುವ ತಿಂಗಳುಗಳಲ್ಲಿ B ಸರಣಿಯನ್ನು ಉತ್ತಮಗೊಳಿಸಲು 10 ಮಿಲಿಯನ್ ಡಾಲರ್ ಬಳಕೆಯಾಗಲಿದೆ.

English summary
An exclusive interview by B.G. Mahesh, CEO Oneindia.in.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X