ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ನಲ್ಲಿ ಸ್ಥಿರಾಸ್ತಿ ನೋಂದಣಿ : ಸರ್ಕಾರದ ಚಿಂತನೆ

By Staff
|
Google Oneindia Kannada News

ಬೆಂಗಳೂರು : ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ, ಸರ್ಕಾರ ಆನ್‌ಲೈನ್‌ನಲ್ಲಿ ಸ್ಥಿರಾಸ್ತಿ ನೋಂದಣಿ ಆರಂಭಿಸುವ ಯೋಚನೆಯಲ್ಲಿದೆ ಎಂದು ಕಂದಾಯ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಶೆಟ್ಟರ್‌ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಸಂಬಂಧ ಎರಡು ತಿಂಗಳೊಳಗೆ ವರದಿ ಒಪ್ಪಿಸುವಂತೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಇದಾದನಂತರ, ಯಾರೇ ಆಗಲಿ ಯಾವುದೇ ಉಪನೋಂದಣಾಧಿಕಾರಿ ಕಚೇರಿಯಲ್ಲಿ, ಅಗತ್ಯ ಮಾರ್ಗದರ್ಶಿ ಮೌಲ್ಯ ನೀಡಿ ತಮ್ಮ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಸರ್ಕಾರ ಡೆವಲಪರ್‌ಗಳಿಗೆ ಉತ್ತೇಜನ ನೀಡುತ್ತಿದೆಯೇ...? :

ಕಬಳಿಕೆಯಾದ ಭೂಮಿಯನ್ನು ಹರಾಜುಮಾಡಿದ ಬಗ್ಗೆ ಎದ್ದಿರುವ ಟೀಕೆಗಳಿಗೆ ಉತ್ತರಿಸುತ್ತಾ, ಸರ್ಕಾರ ಎಂದಿಗೂ ಸಾರ್ವಜನಿಕ ಹರಾಜಿನಲ್ಲಿ ಯಾವುದೇ ಡೆವಲಪರ್‌ಗಳಿಗೆ ಭೂಮಿ ಪಡೆಯಲು ಉತ್ತೇಜನ ನೀಡಿಲ್ಲ ಎಂದು ಶೆಟ್ಟರ್‌ ಸಮರ್ಥಿಸಿಕೊಂಡರು.

ಭೂಗಳ್ಳರಿಂದ ವಶಪಡಿಸಿಕೊಂಡ ಒಟ್ಟು 7,800 ಎಕರೆ ಭೂಮಿಯಲ್ಲಿ, 796 ಎಕರೆ ಹರಾಜು ಮಾಡಲಾಗಿದೆ. ಸರ್ಕಾರಕ್ಕೆ ಸಂದಾಯವಾದ ಬಿಡ್‌ ಮೊತ್ತ 516ಕೋಟಿ ರೂಪಾಯಿ. ಇದಲ್ಲದೆ, ಬಿಡ್‌ ಮೌಲ್ಯ ತೃಪ್ತಿಕರವಾಗಿಲ್ಲವಾದ್ದರಿಂದ, 455 ಎಕರೆ ಭೂಮಿಯನ್ನು ಪುನಃ ಹರಾಜು ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ವಿವರಿಸಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X