ಇನ್ಫೋಸಿಸ್‌ ಸಂಸ್ಥೆಯ ಲಾಭಾಂಶದಲ್ಲಿ ಶೇ.69ರಷ್ಟು ಹೆಚ್ಚಳ

Infosys posts robust results; Q4 net profit up 69%ಬೆಂಗಳೂರು : ಸಾಫ್ಟ್‌ವೇರ್‌ ದಿಗ್ಗಜ ಇನ್ಫೋಸಿಸ್‌ನ ನಾಲ್ಕನೇ ತ್ರೆೃಮಾಸಿಕ ವ್ಯವಹಾರದಲ್ಲಿ ಶೇಕಡಾ 69.27ರಷ್ಟು ನಿವ್ವಳ ಲಾಭ ದಾಖಲಾಗಿದೆ.

ಶುಕ್ರವಾರ ಲಾಭಾಂಶದ ವರದಿ ಬಿಡುಗಡೆಯಾಗಿದ್ದು, ಮಾ.31ಕ್ಕೆ ಅಂತ್ಯವಾದ ಹಣಕಾಸು ವರ್ಷದ ನಾಲ್ಕನೇ ತ್ರೆೃಮಾಸಿಕದಲ್ಲಿ ಸಂಸ್ಥೆ 1,124ಕೋಟಿ ರೂಪಾಯಿ ನಿವ್ವಳ ಲಾಭಗಳಿಸಿದೆ. 2005ನೇ ಸಾಲಿನ ನಾಲ್ಕನೇ ತ್ರೆೃಮಾಸಿಕದ ನಿವ್ವಳ ಲಾಭ 664ಕೋಟಿ ರೂಪಾಯಿಯಾಗಿತ್ತು. ಒಂದು ವರ್ಷದ ಅವಧಿಯಲ್ಲಿ ಲಾಭದ ಏರಿಕೆ 69.27ರಷ್ಟಾಗಿದೆ.

2005ನೇ ಹಣಕಾಸು ವರ್ಷದ ಅಂತ್ಯಕ್ಕೆ ಸಂಸ್ಥೆಯ ಒಟ್ಟು ಲಾಭ 2,563ಕೋಟಿ ರೂಪಾಯಿಯಾಗಿತ್ತು. 2006ನೇ ಹಣಕಾಸು ವರ್ಷದ ಅಂತ್ಯಕ್ಕೆ ಲಾಭ 3,675 ಕೋಟಿ ರೂಪಾಯಿ ತಲುಪಿದೆ. ಅಂದರೆ ಕಂಪನಿಯ ಒಟ್ಟು ಲಾಭದಲ್ಲಿ 43.38ರಷ್ಟು ಏರಿಕೆಯಾಗಿದೆ.

ಸದ್ಯಕ್ಕೆ ಸಂಸ್ಥೆಯ ಒಟ್ಟು ಲಾಭ 9,172ಕೋಟಿ ರೂಪಾಯಿಯಿಂದ 13,524ಕೋಟಿ ರೂಪಾಯಿಗೆ ತಲುಪಿದೆ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+