ಗಾತಾ ರಹೇ ಮೇರಾ ದಿಲ್‌ : ಏ.6ರಂದು ಹಾಡಿನ ಸುಗ್ಗಿ

ಬೆಂಗಳೂರು : ಹಳೆಯ ಸುಮಧುರ ಹಿಂದಿ ಹಾಡುಗಳನ್ನು ನೆನಪಿಸುವ ‘ಗಾತಾ ರಹೇ ಮೇರಾ ದಿಲ್‌’ ರಸಸಂಜೆ ಕಾರ್ಯಕ್ರಮ ಇಂದು(ಏಪ್ರಿಲ್‌ 6) ನಗರದಲ್ಲಿ ನಡೆಯಲಿದೆ.

ವಸಂತನಗದಲ್ಲಿರುವ ಡಾ. ಅಂಬೇಡ್ಕರ್‌ ಭವನದಲ್ಲಿ ಸಂಜೆ 6ಕ್ಕೆ ರಸಸಂಜೆ ಆರಂಭವಾಗಲಿದೆ. ‘ಗಾತಾ ರಹೇ ಮೇರಾ ದಿಲ್‌’ ಎಂಬ ಶೀರ್ಷಿಕೆ ಅಡಿಯಲ್ಲಿ ಈಗಾಗಲೇ ಬೆಂಗಳೂರು, ಚೆನ್ನೈ, ಹೈದರಾಬಾದ್‌ ಹಾಗೂ ಕೊಯಮತ್ತೂರಿನ ಸಿನಿ ರಸಿಕರ ಮನ ತಣಿಸಿರುವ ಚೈನ್ನೈ ಮೂಲದ ಡಿವೈನ್‌ ಮದರ್‌ ಸೊಸೈಟಿ, ಈಗ ಮತ್ತೊಮ್ಮೆ ಬೆಂಗಳೂರಿಗರನ್ನು ಮೋಡಿ ಮಾಡಲು ಸಿದ್ಧತೆ ನಡೆಸಿದೆ.

ಎವರ್‌ ಗ್ರೀನ್‌ ಹೀರೋ ದೇವಾನಂದ್‌, ರಾಜ್‌ ಕಪೂರ್‌, ದಿಲೀಪ್‌ ಕುಮಾರ್‌, ರಾಜೇಂದ್ರ ಕುಮಾರ್‌, ಗುರುದತ್‌, ಶಮ್ಮಿ ಕಪೂರ್‌, ಮಧುಬಾಲಾ, ನೂತನ್‌, ವೈಜಯಂತಿ ಮಾಲಾ, ವಹೀದಾ ರೆಹಮಾನ್‌ ಹಾಗೂ ಮೀನಾ ಕುಮಾರಿ ನಟಿಸಿದ ಚಿತ್ರಗಳ ಹಾಡುಗಳನ್ನು ಕೇಳುಗರು ಅಂದು ಆಲಿಸಬಹುದು.

ಈ ರಸಸಂಜೆಯ ಮೂಲಕ ಸಮಾಜದಲ್ಲಿರುವ ಕಡುಬಡವರಿಗೆ ಆರ್ಥಿಕ ಹಾಗೂ ಶಿಕ್ಷಣ ದೊರಕಿಸುವುದು ನಮ್ಮ ಉದ್ದೇಶ ಎಂದು ಸೊಸೈಟಿಯ ಮುಖ್ಯಸ್ಥ ಎಸ್‌. ಸುರೇಶ್‌ ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 98457 99706

ಅಂತರ್ಜಾಲ ತಾಣದ ವಿಳಾಸ : http://www.seva-dms.com/

(ದಟ್ಸ್‌ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+