ಸಿಇಟಿ ಕೇಂದ್ರದಿಂದ 135 ಅಭ್ಯರ್ಥಿಗಳ ಅರ್ಜಿ ವಜಾ

ಬೆಂಗಳೂರು: ಎಡಗೈ ಹೆಬ್ಬೆಟ್ಟಿನ ಗುರುತಿಲ್ಲದ ಸುಮಾರು 135 ಅರ್ಜಿಗಳನ್ನು ಸಾಮಾನ್ಯ ಪರೀಕ್ಷಾ ಕೇಂದ್ರ(ಸಿಇಟಿ) ತಿರಸ್ಕರಿಸಿದೆ.

ಏಪ್ರಿಲ್‌ 10 ರ ಒಳಗೆ ಅಭ್ಯರ್ಥಿಗಳು ಸಿಇಟಿ ಕೇಂದ್ರಕ್ಕೆ ಭೇಟಿಕೊಟ್ಟು , ಎಡಗೈ ಹೆಬ್ಬೆಟ್ಟಿನ ಗುರುತನ್ನು ಅರ್ಜಿಯಲ್ಲಿ ತುಂಬಬಹುದಾಗಿದೆ ಎಂದು ಸಿಇಟಿ ಕೇಂದ್ರದ ಅಧಿಕಾರಿಗಳು ಹೇಳಿದ್ದಾರೆ.

ಇದೇ ರೀತಿ ಛಾಯಾಚಿತ್ರ(ಫೋಟೊ)ವನ್ನು ಲಗತ್ತಿಸ ಸುಮಾರು 18 ಅರ್ಜಿಗಳನ್ನು ವಜಾ ಮಾಡಲಾಗಿದೆ. ವಜಾಗೊಂಡ ಅಭ್ಯರ್ಥಿಗಳ ಹೆಸರು ಹಾಗೂ ಅರ್ಜಿ ಸಂಖ್ಯೆಯನ್ನು ಸಿಇಟಿ ವೆಬ್‌ಸೈಟ್‌ನಲ್ಲಿ ಹಾಕಲಾಗುವುದು. ಅಭ್ಯರ್ಥಿಗಳು ನಿಗದಿತ ವೇಳೆಯಲ್ಲಿ ಸಿಇಟಿ ಕೇಂದ್ರಕ್ಕೆ ಬಂದು ತಪ್ಪನ್ನು ಸರಿ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.

ಏಪ್ರಿಲ್‌ 25 ರಂದು ಅಭ್ಯರ್ಥಿಗಳು ಸಿಇಟಿ ಪರೀಕ್ಷಾ ಪ್ರವೇಶಪತ್ರಗಳನ್ನು ಸಂಬಂಧಿದ ಕಾಲೇಜುಗಳಲ್ಲಿ ಪಡೆಯಬಹುದಾಗಿದೆ. ಅರ್ಜಿಗಳನ್ನು ಸಿಇಟಿ ಕೇಂದ್ರಕ್ಕೆ ನೇರವಾಗಿ ಸಲ್ಲಿಸಿದವರು ಸಿಇಟಿ ಕೇಂದ್ರದಲ್ಲೆ ಪರೀಕ್ಷಾ ಪ್ರವೇಶ ಪತ್ರವನ್ನು ಪಡೆಯಬಹುದಾಗಿದೆ.

ಮೇ 9 ರಂದು ರಾಜ್ಯದ 205 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ. ಇದರಲ್ಲಿ ಬೆಂಗಳೂರಿನ 56 ಪರೀಕ್ಷಾ ಕೇಂದ್ರಗಳು ಒಳಗೊಂಡಿದೆ.

ಕರ್ನಾಟಕ ಸಿಇಟಿ ಪ್ರವೇಶಪರೀಕ್ಷೆ ಟೈಂ ಟೇಬಲ್‌

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+