ನಿಜ, ಏಪ್ರಿಲ್ 1ರಂದು ಲಾಟರಿ ಲಕ್ಷ್ಮಿಗೆ ಗೇಟ್ ಪಾಸ್!!
ಬೆಂಗಳೂರು : ಏಪ್ರಿಲ್ 1ರಿಂದ ಕರ್ನಾಟಕ, ಲಾಟರಿ ರಹಿತ ರಾಜ್ಯವಾಗಲಿದೆ.
ಪೇಪರ್ ಲಾಟರಿ, ಆನ್‌ಲೈನ್, ಇಂಟರ್‌ನೆಟ್ ಸೇರಿದಂತೆ ಎಲ್ಲಾ ರೀತಿಯ ಲಾಟರಿಗಳ ನಿಷೇಧಿಸಿ, ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಬಜೆಟ್‌ನಲ್ಲಿ ಹೇಳಿದ ಮಾತನ್ನು ರಾಜ್ಯ ಸರ್ಕಾರ ಉಳಿಸಿಕೊಂಡಿದೆ. ಪ್ರತಿರೋಧದ ಮಧ್ಯೆಯೇ ದೋಸ್ತಿ ಸರ್ಕಾರ ದಿಟ್ಟ ನಿಲುವನ್ನು ಕೈಗೊಂಡಿದೆ.
ರಾಜ್ಯದಲ್ಲಿ ಸುಮಾರು 40ಸಾವಿರ ಜನ ಲಾಟರಿ ಟಿಕೆಟ್ ಮಾರಾಟಗಾರರಿದ್ದಾರೆ. ಅವರು ವ್ಯಾಪಾರಿಗಳಾಗಿರುವ ಕಾರಣ, ಬೇರೆ ಉದ್ಯೋಗ ಹುಡುಕಿಕೊಳ್ಳಲಿ. ಲಾಟರಿ ಮಾರಾಟಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಉದ್ದೇಶ ಸರ್ಕಾರದ ಮುಂದಿಲ್ಲ ಎಂದು ಸರ್ಕಾರ ಹೇಳಿದೆ.
ಲಾಟರಿ ಇತಿಹಾಸ : ಕರ್ನಾಟಕದಲ್ಲಿ 1969ರಲ್ಲಿ ಲಾಟರಿ ಆರಂಭ. ಆರಂಭದಲ್ಲಿ ವರ್ಷಕ್ಕೆ ಎರಡು ಡ್ರಾ ಮಾತ್ರ ನಡೆಯುತ್ತಿತ್ತು. ಈಗ ಡ್ರಾಗಳ ಸಂಖ್ಯೆ 2540.
ಲಾಟರಿ ನಿಷೇಧದಿಂದ ಮಟ್ಕಾಗೆ ಅನುಕೂಲವಾಗುವ ಸಾಧ್ಯತೆಗಳಿವೆ ಎಂಬುದು ಸದ್ಯದ ಆತಂಕ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications