ತಮ್ಮ ನೀಳ ಕೇಶಕ್ಕೆ ಕತ್ತರಿ ಹಾಕಿದ ದೋನಿ ಅಭಿಮಾನಿಗಳು!
ಬೆಂಗಳೂರು : ವಿಶ್ವಕಪ್ ಕ್ರಿಕೆಟ್ ಅಂಗಳದಿಂದ ದೂರ ಉಳಿದ ಭಾರತೀಯ ಕ್ರಿಕೆಟ್ ತಂಡ ತವರಿಗೆ ಮರಳಿದೆ. ಅಭಿಮಾನಿಗಳ ಭಾವುಕತೆ, ಅಪಾಯಕ್ಕೆ ಕಾರಣವಾಗಬಹುದೆಂದು ಪೊಲೀಸರ ರಕ್ಷಣೆಯಲ್ಲಿ ಕ್ರಿಕೆಟ್‌ಪಟುಗಳು ಮನೆ ಸೇರಿದ್ದಾರೆ.
ಈ ಮಧ್ಯೆ ಮಹೇಂದ್ರ ಸಿಂಗ್ ದೋನಿ ಶೈಲಿಯ ಕೇಶಕ್ಕೆ ಅಭಿಮಾನಿಗಳು ಕತ್ತರಿ ಹಾಕಿದ್ದಾರೆ. ಕ್ಷೌರದಂಗಡಿಗೆ ತೆರಳಿ, ಕೇಶ ಶೈಲಿಯನ್ನು ಬದಲಿಸಿಕೊಳ್ಳುತ್ತಿದ್ದಾರೆ. ದೋನಿ ಆಟವನ್ನು ಮೆಚ್ಚಿ, ಅವರಂತೆಯೇ ಉದ್ದನೆಯ ಕೂದಲು ಬೆಳೆಸಿಕೊಂಡಿದ್ದ ಅಭಿಮಾನಿಗಳ ಸಂಖ್ಯೆ ದೊಡ್ಡದು. ಅದೊಂದು ಫ್ಯಾಷನ್ ಮತ್ತು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.
ಆದರೆ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ವಿರುದ್ಧ ದೋನಿ ಪ್ರದರ್ಶಿಸಿದ ಕಳಪೆ ಆಟ ಕಂಡು, ಅವರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಅವರಂತೆಯೇ ಉದ್ದದ ಕೂದಲು ಬಿಟ್ಟ ಅಭಿಮಾನಿಗಳು ಗೇಲಿಗೆ ಗುರಿಯಾಗಿದ್ದು, ಕೂದಲು ಕತ್ತರಿಸಿಕೊಳ್ಳಲು ಮುಂದಾಗಿದ್ದಾರೆ.
ವಿರೋಚಿತ ಸ್ವಾಗತ ನೀಡಲು ಸಜ್ಜಾಗಿದ್ದ ಅಭಿಮಾನಿಗಳು, ಹಿಡಿ ಶಾಪ ಹಾಕುತ್ತ ಕುಳಿತಿದ್ದಾರೆ. ಮುಗ್ಗರಿಸಿದ ಕ್ರಿಕೆಟ್ ಕಲಿಗಳಿಗೆ ಸಂಬಂಧಿಸಿದ ಜೋಕ್‌ಗಳು, ಎಲ್ಲೆಡೆ ಕೇಳಿ ಬರುತ್ತಿವೆ.
ಓದುಗರು ತಮ್ಮಲ್ಲಿನ ಜೋಕ್ಸ್‌ಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications