ನಾಳೆ ಬಿಬಿಎಂಪಿಯಿಂದ ಪ್ರಥಮ ಬಜೆಟ್ ಮಂಡನೆ
ಬೆಂಗಳೂರು: ಬೆಂಗಳೂರು ಮಹಾನಗರಪಾಲಿಕೆ (ಬಿಎಂಪಿ)ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವ ಭರವಸೆಯಾಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ(ಬಿಬಿಎಂಪಿ) ಶುಕ್ರವಾರ (ಮಾ. 30)ದಂದು ತನ್ನ ಮೊದಲ ಬಜೆಟ್ ಮಂಡಿಸಲಿದೆ.
ಕಳೆದ ವರ್ಷ ಬೆಂಗಳೂರು ಮಹಾನಗರಪಾಲಿಕೆ 2006-07 ನೇ ಸಾಲಿನ ಬಜೆಟ್‌ನಲ್ಲಿ ನೀಡಿದ್ದ ಯೋಜನೆಗಳ ಪಟ್ಟಿ ಯಂತೆ14 ಫ್ಲೈ ಓವರ್ ಹಾಗೂ ಗ್ರೇಡ್ ಸೆಪರೇಟರ್‌ಗಳು, 8 ಪಾದಚಾರಿಗಳಿಗಾಗಿ ಸಬ್ ವೇ, 6 ರೈಲ್ವೇ ಕೆಳ ಸೇತುವೆ ಮತ್ತು ಮೇಲುಸೇತುವೆ ಹಾಗೂ ಒಳ ವರ್ತುಲ ರಸ್ತೆ ನಿರ್ಮಾಣ (ಒಟ್ಟು 1,870 ಕೋಟಿ) ಕಾರ್ಯ ಮುಗಿದಿರಬೇಕಿತ್ತು. ಆದರೆ ಯಾವುದೇ ಯೋಜನೆ ಪೂರ್ಣಗೊಂಡಿಲ್ಲ. ಕೆಲವು ಅರ್ಧಕ್ಕೆ ನಿಂತಿವೆ.
ಇದರ ಜೊತೆಗೆ 177 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣೆ ಹಾಗೂ ಆಧುನೀಕರಣ ಮಾಡುವುದಾಗಿ ಪಾಲಿಕೆ ಹೇಳಿತ್ತು. ಆದರೆ ಇನ್ನೂ ಕಾರ್ಯಗತವಾಗಿಲ್ಲ. 20 ಸಾವಿರ ಬಡ ಕುಟುಂಬಗಳಿಗೆ ಹೆಲ್ತ್ ಕಾರ್ಡ್ ವಿತರಣೆ ಆಗಿಲ್ಲ. ಉದ್ಯಾನಗಳ ನಿರ್ವಹಣೆಗಾಗಿ ಸಾರ್ವಜನಿಕರ ಸಹಾಯದೊಂದಿಗೆ ಶುರುವಾಗಬೇಕಿದ್ದ ‘ಉದ್ಯಾನ ಬೆಂಗಳೂರು’ ಕಾರ್ಯಕ್ರಮ ಇನ್ನು ಕಡತದಿಂದ ಹೊರಬಿದ್ದಿಲ್ಲ.
ಎಲ್ಲಾ ನಿರೀಕ್ಷೆಗಳನ್ನು ಮತ್ತೊಮ್ಮೆ ಹುಟ್ಟುಹಾಕುತ್ತಾ, ಉದ್ದೇಶಿತ ಯೋಜನೆಗಳನ್ನು ಪೂರ್ಣಗೊಳಿಸುವುದೇ ಅಥವಾ ಅರ್ಧಕ್ಕೆ ನಿಂತಿರುವ ಯೋಜನೆಗಳ ಪಟ್ಟಿ ಇನ್ನಷ್ಟು ಸೇರ್ಪಡೆ ಆಗುವುದೇ ಎಂದು ಕಾದು ನೋಡಬೇಕು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications