ಜಿಂಬಾಬ್ವೆ-ಐರ್ಲೆಂಡ್‌ ಪಂದ್ಯ ; ರೋಚಕ ಟೈನಲ್ಲಿ ಅಂತ್ಯ!

ಜಮೈಕಾ : ಜಿಂಬಾಬ್ವೆ ಮತ್ತು ಐರ್ಲೆಂಡ್‌ ನಡುವೆ ನಡೆದ ವಿಶ್ವಕಪ್‌ ಕ್ರಿಕೆಟ್‌ನ ಲೀಗ್‌ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ.

ಗುರುವಾರ(ಮಾಚ್‌ 15) ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ ನಿಗದಿತ 50 ಓವರುಗಳಲ್ಲಿ 9ವಿಕೆಟ್‌ಗಳ ನಷ್ಟಕ್ಕೆ221ರನ್‌ಗಳನ್ನು ಪೇರಿಸಿತು. ಜೆರಿಮಿ ಬ್ರೇ ಅಜೇಯ 115ರನ್‌ ಗಳಿಸಿ ಗಮನ ಸೆಳೆದರು.

ಗೆಲುವಿನ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಒಂದು ಹಂತದಲ್ಲಿ 4ವಿಕೆಟ್‌ ಕಳೆದುಕೊಂಡು 203ರನ್‌ ಗಳಿಸಿ ಸುಸ್ಥಿತಿಯಲ್ಲಿತ್ತು. ಗೆಲುವು ಜಿಂಬಾಬ್ವೆಗೆ ಒಲಿದೇ ಬಿಟ್ಟಿತು ಎನ್ನುವಷ್ಟರಲ್ಲಿ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಐರ್ಲೆಂಡ್‌, 221ರನ್‌ಗಳಾಗುವಷ್ಟರಲ್ಲಿ ಜಿಂಬಾಬ್ವೆಯ ಎಲ್ಲ ವಿಕೆಟ್‌ಗಳನ್ನೂ ಪತನಗೊಳಿಸಿತು. ಆಮೂಲಕ ವಿಶ್ವಕಪ್‌ ಇತಿಹಾಸದಲ್ಲಿ ಮೂರನೇ ಟೈ ಪಂದ್ಯದಾಖಲಾಗುವಂತೆ ಮಾಡಿತು.

1999ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಆಗ ಎರಡೂ ತಂಡಗಳ ಮೊತ್ತ 213. 2003ರ ವಿಶ್ವಕಪ್‌ನಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಆಗ ಎರಡೂ ತಂಡಗಳು 230ರನ್‌ಗಳನ್ನು ಪೇರಿಸಿದ್ದವು.

ಶ್ರೀಲಂಕಾಗೆ ನಿರಾಯಾಸ ಗೆಲುವು : ಟ್ರಿನಿಡ್ಯಾಡ್‌ನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ, ಕ್ರಿಕೆಟ್‌ ಲೋಕಕ್ಕೆ ಅಂಬೆಗಾಲಿಡುತ್ತಿರುವ ಬರ್ಮುಡಾ ವಿರುದ್ಧ ಶ್ರೀಲಂಕಾ 243ರನ್‌ಗಳ ನಿರಾಯಾಸ ಗೆಲುವು ಪಡೆಯಿತು.

ಮೊದಲು ಬ್ಯಾಟ್‌ ಶ್ರೀಲಂಕಾ ನಿಗದಿತ 50 ಓವರುಗಳಲ್ಲಿ 6ವಿಕೆಟ್‌ಗಳ ನಷ್ಟಕ್ಕೆ 321ರನ್‌ಗಳನ್ನು ಸೇರಿಸಿತು. ಜಯವರ್ಧನೆ, ಸಂಗಕ್ಕಾರ, ಚಾಮರ ಸಿಲ್ವಾ ಅನುಕ್ರಮವಾಗಿ 85, 76 ಹಾಗೂ ಅಜೇಯ 55ರನ್‌ಗಳನ್ನು ಸಿಡಿಸಿದರು.

ಇದಕ್ಕುತ್ತರವಾಗಿ ಬರ್ಮುಡಾ, 24.4 ಓವರುಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 78ರನ್‌ಗಳನ್ನು ಗಳಿಸಲು ಮಾತ್ರ ಶಕ್ತವಾಯಿತು.

ಶುಕ್ರವಾರದ ಪಂದ್ಯಗಳು :

ಇಂಗ್ಲೆಂಡ್‌-ನ್ಯೂಜಿಲೆಂಡ್‌(‘ಸಿ’ ಗುಂಪು)
ಕ್ರೀಡಾಂಗಣ : ಬೆಸೆಜಾರ್‌(ಸೇಂಟ್‌ ಲೂಸಿಯಾ)
ದಕ್ಷಿಣ ಆಫ್ರಿಕಾ-ಹಾಲೆಂಡ್‌(‘ಎ’ ಗುಂಪು)
ಕ್ರೀಡಾಂಗಣ : ವಾರ್ನರ್‌ ಪಾರ್ಕ್‌(ಸೇಂಟ್‌ ಕಿಟ್ಸ್‌)

(ಏಜನ್ಸೀಸ್‌)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+