ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ಬೋರ್ಡ್‌ ಬಾಕಿ ಉಳಿಸಿಕೊಂಡ ತೆರಿಗೆ 423ಕೋಟಿ!

By Staff
|
Google Oneindia Kannada News

ಬೆಂಗಳೂರು : ಕೇಂದ್ರ ಸರ್ಕಾರಿ ಸ್ವಾಮ್ಯದ ಕಾಫಿ ಮಂಡಳಿಗೆ, ಬಾಕಿ ಇರುವ ತೆರಿಗೆ ಹಣ ಪಾವತಿಸುವಂತೆ ಕರ್ನಾಟಕ ಸರ್ಕಾರ ನೋಟೀಸು ನೀಡಿದೆ.

ಕರ್ನಾಟಕ ರಾಜ್ಯ ವಾಣಿಜ್ಯತೆರಿಗೆ ಇಲಾಖೆ ನೋಟಿಸಿನ ಪ್ರಕಾರ, ಕಾಫಿ ಮಂಡಳಿ ಸುಮಾರು 423 ಕೋಟಿ ರೂ. ಖರೀದಿ ತೆರಿಗೆ ಹಣವನ್ನು 15 ದಿನಗಳ ಗಡುವಿನಲ್ಲಿ ಕಟ್ಟಬೇಕಾಗುತ್ತದೆ. ಇಲ್ಲದಿದ್ದರೆ ಕಾಫಿ ಮಂಡಳಿಗೆ ಒಳಪಡುವ ವಸ್ತುಗಳು, ಕಟ್ಟಡ, ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಲಾಗುತ್ತದೆ.

ಹಿನ್ನೆಲೆ : ಕಾಫಿ ಮಂಡಳಿ, ಕಾಫಿ ಬೆಳೆಗಾರರಿಂದ ಕಾಫಿ ಬೀಜ ಪಡೆದು, ಅದನ್ನು ಶೇಖರಿಸಿ, ಉತ್ತಮ ಬೆಲೆಗೆ ಮಾರಾಟ ಮಾಡುತ್ತಿತ್ತು. 1989ರಲ್ಲಿ ರಾಜ್ಯ ಸರ್ಕಾರ ಖರೀದಿ ತೆರಿಗೆ ನೀಡಬೇಕೆಂದು ಕೋರಿತ್ತು. ಆದರೆ ಯಾವುದೇ ವಾಣಿಜ್ಯ ಉದ್ದೇಶವಿಲ್ಲದೆ ಕೇವಲ ಬೆಳೆಗಾರರಿಗೆ ನ್ಯಾಯಯುತ ಬೆಲೆ ಒದಗಿಸುವುದಷ್ಟೆ ನಮ್ಮ ಕೆಲಸ. ಹೀಗಾಗಿ ತೆರಿಗೆ ನೀಡಿಕೆ ಸಾಧುವಲ್ಲ ಎಂದು ಕಾಫಿ ಮಂಡಳಿ ಹೇಳಿತ್ತು. ನಂತರ 1996-97ರವರೆಗಿನ ತೆರಿಗೆ ಹಣ 109 ಕೋಟಿ ನೀಡಬೇಕೆಂದು ಕಾಫಿ ಮಂಡಳಿಗೆ ರಾಜ್ಯಸರ್ಕಾರ ನೋಟೀಸು ನೀಡಿತ್ತು.

ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಕಾಫಿ ಮಂಡಳಿ, ಹೈಕೋರ್ಟ್‌ ಮೊರೆ ಹೊಕ್ಕಿತ್ತು . ಹೈಕೋರ್ಟ್‌ನಲ್ಲಿ ಕೇಸ್‌ ಇತ್ಯರ್ಥ ವಾಗಲಿಲ್ಲ. ಇತ್ತೀಚೆಗೆ ಕೇಂದ್ರ ವಾಣಿಜ್ಯದಿಂದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ತೆರಿಗೆ ವಿನಾಯಿತಿ ನೀಡುವಂತೆ ಪತ್ರ ಬಂದಿತ್ತು.

ಇದಕ್ಕೆ ಬದಲಾಗಿ ರಾಜ್ಯ ಸರ್ಕಾರ, ಕಾಫಿ ಮಂಡಳಿಗೆ 423 ಕೋಟಿ ರೂ. ಖರೀದಿ ತೆರಿಗೆ ಹೇರಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X