ಕಿರಣ್ ದೇಸಾಯಿಗೆ ಯುಎಸ್‌ನ ಪ್ರತಿಷ್ಠಿತ ಸಾಹಿತ್ಯಕ ಪ್ರಶಸ್ತಿ
ನ್ಯೂಯಾರ್ಕ್ : ಭಾರತೀಯ ಸಂಜಾತ ಲೇಖಕಿ ಕಿರಣ್ ದೇಸಾಯಿ ತಮ್ಮ ‘ದಿ ಇನ್‌ಹೆರಿಟನ್ಸ್ ಆಫ್ ಲಾಸ್’( The Inheritance of Loss) ಎಂಬ ಕಾದಂಬರಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪ್ರತಿಷ್ಠಿತ ‘ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಫಿಕ್ಷನ್ ಪ್ರಶಸ್ತಿ’ ಪಡೆದುಕೊಂಡಿದ್ದಾರೆ.
ಚಿಮಾಮಂಡ ನ್ಗೋರಿkು ಅಡಿಚಿರವರ ‘ಹಾಫ್ ಆಫ್ ಎ ಯೆಲ್ಲೋ ಸನ್’, ಡೇವ್ ಎಗ್ಗರ್ಸ್‌ರವರ ‘ವಾಟ್ ಈಸ್ ದಿ ವಾಟ್’, ರಿಚರ್ಡ್ ಫೋರ್ಡ್‌ರ ‘ದಿ ಲೇ ಆಫ್ ದಿ ಲ್ಯಾಂಡ್’ ಮತ್ತು ಕಾರ್‌ಮ್ಯಾಕ್ ಮ್ಯಾಕ್‌ಕಾರ್ತಿಯವರ ‘ದಿ ರೋಡ್’ ಕೃತಿಗಳು ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದವು.
ಇದೇ ಕೃತಿಗೆ ಕಿರಣ್ ದೇಸಾಯಿ ಈಗಾಗಲೇ ಪ್ರತಿಷ್ಠಿತ ‘ಮ್ಯಾನ್ ಬೂಕರ್ ಬಹುಮಾನ’ ಪಡೆದಿದ್ದಾರೆ. ಕಿರಣ್ ತಾಯಿ ಅನಿತಾ ದೇಸಾಯಿ ಸ್ವತಃ ಕಾದಂಬರಿಕಾರ್ತಿಯಾಗಿದ್ದು, ಮೂರು ಬಾರಿ ‘ಮ್ಯಾನ್ ಬೂಕರ್ ಬಹುಮಾನ’ಕ್ಕೆ ನಾಮಕರಣಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
(ಏಜನ್ಸೀಸ್)












Click it and Unblock the Notifications