ಬನವಾಸಿ ಬೈಕ್ ಯಾತ್ರೆ : 30 ದಿನದಲ್ಲಿ ದೇಶ ಪ್ರದಕ್ಷಿಣೆ!
ಬೆಂಗಳೂರು : 30 ದಿನಗಳಲ್ಲಿ 28 ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳ ಪ್ರದಕ್ಷಿಣೆ ಹಾಕಲು, ಬೆಂಗಳೂರಿನ ಯುವಕರೊಬ್ಬರು ಮುಂದಾಗಿದ್ದಾರೆ.
ಬೈಕ್ ಯಾತ್ರೆ ಮೂಲಕ, ದಾಖಲೆ ಬರೆಯಲು ಹೊರಟಿರುವವರು; ಕನ್ನಡ-ಇಂಗ್ಲಿಷ್‘ಭಾಷಾ ಲೋಕ’ ಖ್ಯಾತಿಯ ಪ್ರಕೃತಿ ಎನ್.ಬನವಾಸಿ. ಗುರುವಾರವಷ್ಟೇ ನೃಪತುಂಗ ರಸ್ತೆಯಲ್ಲಿ ಪುನೀತ್ ರಾಜ್‌ಕುಮಾರ್, ಬನವಾಸಿಯವರ ‘ದಿ ಅಪಾಚಿ ಇಂಡಿಯನ್ ಟ್ರಯಲ್ ಬ್ಲೇಜ್’ ಬೈಕ್ ಯಾತ್ರೆಗೆ ಚಾಲನೆ ನೀಡಿದ್ದಾರೆ.
30ದಿನಗಳಲ್ಲಿ ಬನವಾಸಿ 16,288 ಕಿ.ಮೀಗಳನ್ನು ಕ್ರಮಿಸಿ, ತವರಿಗೆ ಮರಳಲಿದ್ದಾರೆ. ‘ಸುರಕ್ಷತೆ ಮೊದಲು, ಸಾಹಸಗಳು ನಂತರ’ ಎಂಬ ಸಂದೇಶವನ್ನು ತಮ್ಮ ಬೈಕ್ ಯಾತ್ರೆಯಲ್ಲಿ ಅವರು ಪ್ರಚಾರ ಮಾಡಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications