ಇದು 26ಸಾವಿರ ಪದಗಳ ಇಂಗ್ಲಿಷ್-ಕೊಂಕಣಿ ನಿಘಂಟು
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಇಂಗ್ಲಿಷ್-ಕೊಂಕಣಿ ನಿಘಂಟನ್ನು ಬಿಡುಗಡೆ ಮಾಡಲಿದೆ.
ಫೆಬ್ರವರಿ 10ರಂದು ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಬಿಷಪ್ ಅಲೋಷಿಯಸ್ ಪೌಲ್ ಡಿಸೋಜಾ ಅವರು ನಿಘಂಟನ್ನು ಲೋಕಾರ್ಪಣೆ ಮಾಡಲಿದ್ದಾರೆ.
1883ರಲ್ಲೇಕೊಂಕಣಿ-ಇಂಗ್ಲಿಷ್ ನಿಘಂಟು ಓದುಗರಿಗೆ ಲಭ್ಯವಿತ್ತು, ಕೊಂಕಣಿ ಸಾಹಿತ್ಯ ಅಕಾಡೆಮಿ 2001ರಲ್ಲಿ 7,000 ಪದಗಳುಳ್ಳ ನಿಘಂಟನ್ನು ತಯಾರಿಸಿತ್ತು. ಈಗ ಹೊಸ ನಿಘಂಟಿನಿಂದ ಯುವ ಪೀಳಿಗೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಉಡುಪಿಯ ಸರ್ಕಾರಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಸ್ಟಿಫನ್ ಪರ್ಮುಡೆ ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ ಸುಮಾರು 60 ಲಕ್ಷ ಕೊಂಕಣಿಗರಿದ್ದಾರೆ. ಇವರಲ್ಲಿ ಶೇ.45ರಷ್ಟು ಜನ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಸ್ವಂತ ಬರವಣಿಗೆಯ ಲಿಪಿ ಇರದ ಕೊಂಕಣಿ ಭಾಷೆಯನ್ನು ಕನ್ನಡ, ಹಿಂದಿ, ಮಲಯಾಳಂ ಹಾಗೂ ರೋಮನ್ ಭಾಷೆಗಳನ್ನು ಬಳಸಿ ಬರೆಯಲಾಗುತ್ತದೆ. ನಿಘಂಟನ್ನು ಹೊರತರುವ ಕಾರ್ಯದಲ್ಲಿ ಮಾಜಿ ಸಚಿವ ಅರ್ .ವಿ. ದೇಶಪಾಂಡೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications