ದೂರದರ್ಶನಲ್ಲೂ ಕ್ರಿಕೆಟ್ ನೇರ ಪ್ರಸಾರ : ಸುಗ್ರೀವಾಜ್ಞೆ
ನವದೆಹಲಿ : ಪ್ರಮುಖ ಪಂದ್ಯಾವಳಿಗಳ ನೇರ ಪ್ರಸಾರವನ್ನು ದೂರದರ್ಶನದೊಂದಿಗೆ ಹಂಚಿಕೊಳ್ಳಬೇಕೆಂಬ, ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯಿಂದ ಕ್ರೀಡಾ ಪ್ರೇಮಿಗಳು ಹರ್ಷಗೊಂಡಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಸಮೀಪದಲ್ಲಿಯೇ ಇರುವ ಹೊತ್ತಿನಲ್ಲಿ, ಕೇಂದ್ರದ ನಿರ್ಧಾರ ಹೊರಬಿದ್ದಿದೆ. ಸರ್ಕಾರದ ಸುಗ್ರೀವಾಜ್ಞೆಯಿಂದ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳ ಪ್ರಮುಖ ಪಂದ್ಯಗಳು ಖಾಸಗಿ ಚಾನೆಲ್‌ಗಳ ಜೊತೆಗೆ, ದೂರದರ್ಶನದಲ್ಲೂ ಪ್ರಸಾರವಾಗಲಿವೆ. ಜೊತೆಗೆ ಆಲ್ ಇಂಡಿಯಾ ರೇಡಿಯೋದಲ್ಲಿ ವೀಕ್ಷಕ ವಿವರಣೆ ಲಭ್ಯವಾಗಲಿದೆ.
ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಸರಣಿ ಕ್ರಿಕೆಟ್‌ನ ನೇರ ಪ್ರಸಾರದ ಹಕ್ಕನ್ನು ನಿಂಬಸ್ ಪಡೆದಿತ್ತು. ಹೀಗಾಗಿ ದೂರದರ್ಶನದಲ್ಲಿ 7ನಿಮಿಷಗಳ ಅಂತರದಲ್ಲಿ ಪಂದ್ಯಾವಳಿ ಪ್ರಸಾರವಾಗಿತ್ತು. ಈ ಪರಿಸ್ಥಿತಿ ಕ್ರೀಡಾಭಿಮಾನಿಗಳಿಗೆ ಬೇಸರ ತಂದಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಸುಗ್ರೀವಾಜ್ಞೆಯನ್ನು ಹೊರಡಿಸಿದೆ.
(ಏಜನ್ಸೀಸ್)












Click it and Unblock the Notifications