ಬಾಂಗ್ಲಾದಲ್ಲಿ ತುರ್ತು ಪರಿಸ್ಥಿತಿ; ಚುನಾವಣೆ ಮುಂದೂಡಿಕೆ
ಢಾಕಾ : ಸಾರ್ವತ್ರಿಕ ಚುನಾವಣೆಯಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆಗಳಿವೆ ಎಂದು ಶಂಕಿಸಿ, ಚುನಾವಣೆಯನ್ನು ಮುಂದೂಡಲಾಗಿದೆ. ಅಲ್ಲದೇ ಬಾಂಗ್ಲಾದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಲಾಗಿದೆ.
ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾಗಬಹುದಾದ ಗಲಭೆ ನಿಯಂತ್ರಿಸಲು, ಪ್ರತಿ ದಿನ ರಾತ್ರಿ 11ರಿಂದ ಬೆಳಗ್ಗೆ 5ರ ತನಕ ಕಫ್ಯೂ ವಿಧಿಸಲಾಗಿದೆ.
ದೇಶದಲ್ಲಿ ಮುಂದುವರೆದ ಹಿಂಸಾಚಾರಗಳಿಂದ ಜ.22ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ದೇಶದ ಅಧ್ಯಕ್ಷ ಇಯಾಜುದ್ದೀನ್ ಅಹಮದ್ ಮುಂದೂಡಿದ್ದಾರೆ. ಜೊತೆಗೆ ಪ್ರತಿ ಪಕ್ಷಗಳ ಒತ್ತಡಕ್ಕೆ ಮಣಿದು, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ವಾಜಿದ್ ನೇತೃತ್ವದ ಅವಾಮಿ ಲೀಗ್ ಮೈತ್ರಿಕೂಟ, ಚುನಾವಣೆ ನೀತಿಯ ಪರಿಷ್ಕರಣೆಗೆ ಒತ್ತಾಯಿಸಿ ದೇಶದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಚುನಾವಣೆ ಬಹಿಷ್ಕರಿಸುವುದಾಗಿ ಅದು ಹೇಳಿಕೆ ನೀಡಿದ್ದರಿಂದ, ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
(ಏಜನ್ಸೀಸ್)












Click it and Unblock the Notifications