ವಿವಿಧ ಕ್ಷೇತ್ರಗಳಲ್ಲಿನ ಪ್ರಖ್ಯಾತರ ಬಾಯಲ್ಲಿ ಬೇಂದ್ರೆ ಪದ್ಯ!

ಬೆಂಗಳೂರು : ವರಕವಿ ಬೇಂದ್ರೆ ಪದ್ಯಗಳನ್ನು ಜನರ ಬಳಿಗೆ ಕೊಂಡೊಯ್ಯುವ ವಿನೂತನ ಕಾರ್ಯಕ್ರಮವೊಂದು, ಭಾನುವಾರ(ನ.26) ನಗರದ ಯವನಿಕಾ ಸಭಾಂಗಣದಲ್ಲಿ ಜರುಗಲಿದೆ.

ಅಂದು ಬೆಳಗ್ಗೆ 9.30ಕ್ಕೆ ಆರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಪತ್ರಕರ್ತರು, ಕಲಾವಿದರು, ಸಾಹಿತಿಗಳು, ರಂಗ ದಿಗ್ಗಜರು, ಕ್ರಿಕೆಟ್‌ ಪಟುಗಳು, ಸಿನಿಮಾ ನಟ-ನಟಿಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಖ್ಯಾತನಾಮರು ಬೇಂದ್ರೆ ಕವನಗಳನ್ನು ಓದಲಿದ್ದಾರೆ.

‘ನಾದಲೀಲೆ’ ಹೆಸರಿನಲ್ಲಿ ಇಂತಹ ವಿನೂತನ ಕಾರ್ಯಕ್ರಮವನ್ನು ಅಷ್ಟದಿಕ್ಕು ಪ್ರಕಾಶನ ಮತ್ತು ದೇಶಕಾಲ ತ್ರೆೃಮಾಸಿಕ ಜಂಟಿಯಾಗಿ ಸಂಘಟಿಸಿದೆ.

ಬೇಂದ್ರೆ ಪದ್ಯ ಓದಿ ಚಪ್ಪಾಳೆ ಗಿಟ್ಟಿಸೋ ಮಂದಿ ಯಾರ್ಯಾರು ಗೊತ್ತಾ? :

ಪಂ.ಪರಮೇಶ್ವರ ಹೆಗಡೆ, ಯು.ಆರ್‌.ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗ ಪಟ್ಟಣಶೆಟ್ಟಿ, ಎಸ್‌.ಜಿ.ವಾಸುದೇವ್‌, ಸಿ.ಆರ್‌.ಸಿಂಹ, ಸಿದ್ದಲಿಂಗಯ್ಯ, ಬಿ.ಜಯಶ್ರೀ, ಕಿ.ರಂ.ನಾಗರಾಜು, ರವಿ ಬೆಳಗೆರೆ, ಪ್ರತಿಭಾ ನಂದಕುಮಾರ್‌, ಪವಿತ್ರಾ ಲೋಕೇಶ್‌, ಕೆ.ಎಚ್‌.ಶ್ರೀನಿವಾಸ್‌, ರಘುನಂದನ, ಎಚ್‌.ಜಿ.ಸೋಮಶೇಖರ್‌ ರಾವ್‌, ಶ್ರೀನಿವಾಸ ಜಿ.ಕಪ್ಪಣ್ಣ, ವಿಶ್ವೇಶ್ವರ ಭಟ್‌, ವಿಜಯ ಭಾರದ್ವಾಜ್‌, ಜಿ.ಎಂ.ಶಿರಹಟ್ಟಿ, ಶ್ರೀಕಾಂತ, ಟಿ.ಎನ್‌.ಸೀತಾರಾಂ, ರೇಖಾ ಹೆಬ್ಬಾರ್‌, ಚಿರಂಜೀವಿ ಸಿಂಗ್‌ ಇತ್ಯಾದಿ ಇತ್ಯಾದಿ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+