ಏಷ್ಯಾದ ಹೀರೋಗಳ ಪಟ್ಟಿಯಲ್ಲಿ ಗಾಂಧಿ, ತೆಂಡೂಲ್ಕರ್
ನವದೆಹಲಿ : ಭಾರತದ ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರು, ಸಚಿನ್ ತೆಂಡೂಲ್ಕರ್, ಇನ್ಫೋಸಿಸ್ ನಾರಾಯಣಮೂರ್ತಿ ಅವರುಗಳನ್ನು ‘ಏಷ್ಯಾದ ಹೀರೋ’ಗಳೆಂದು ಟೈಮ್ ನಿಯತಕಾಲಿಕೆ ಗುರ್ತಿಸಿದೆ.
ತನ್ನ 60ನೇ ವರ್ಷಾಚರಣೆ ಸಂದರ್ಭದಲ್ಲಿ ಹೊರತರುತ್ತಿರುವ ಸಂಚಿಕೆಯಲ್ಲಿ, ಏಷ್ಯಾದ ಹೀರೋಗಳ ಪಟ್ಟಿಯನ್ನು ಪ್ರಕಟಿಸಿದೆ. ಪಟ್ಟಿಯಲ್ಲಿ ಉದ್ಯಮಿ ಲಕ್ಷ್ಮಿ ಮಿತ್ತಲ್, ಅರ್ಥ ಶಾಸ್ತ್ರಜ್ಞ ಅಮಾರ್ತ್ಯ ಸೇನ್, ಧರ್ಮಗುರು ದಲೈ ಲಾಮಾ, ಪಾಕಿಸ್ತಾನದ ಪಿತಾಮಹ ಮಹಮದ್ ಆಲಿ ಜಿನ್ನಾ, ಶಾಂತಿ ದೇವತೆ ಮದರ್ ತೆರೇಸಾ, ನೊಬೆಲ್ ವಿಜೇತ ಮಹಮದ್ ಯೂನಸ್ ಮತ್ತಿತರರ ಹೆಸರುಗಳೂ ಇವೆ.
ಏಷ್ಯಾದ ಹೀರೋಗಳ ಬಗ್ಗೆ ಲೇಖನಗಳೂ ಇವೆ. ನ.13ರಂದು ಮಾರುಕಟ್ಟೆಯಲ್ಲಿ ಸಂಚಿಕೆ ಲಭ್ಯ.
(ಏಜನ್ಸೀಸ್)











Click it and Unblock the Notifications