ಅಕ್ರಮ ವಾಣಿಜ್ಯ ಮಳಿಗೆಗಳಿಗೆ ಬೆಂಗಳೂರಲ್ಲೂ ಬೀಗ
ಬೆಂಗಳೂರು : ಬೆಂಗಳೂರು ಮಹಾನಗರಪಾಲಿಕೆ ವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ವಾಣಿಜ್ಯ ಮಳಿಗೆಗಳಿಗೆ ಬೀಗ ಹಾಕುವ ಕಾರ್ಯಾಚರಣೆ ಆರಂಭಿಸಿದೆ.
ಮೊದಲ ಹಂತದ ಕಾರ್ಯಾಚರಣೆ ಸದಾಶಿವನಗರದಲ್ಲಿ ಆರಂಭವಾಗಿದ್ದು, ಮುಂದಿನ ಹಂತದಲ್ಲಿ ಮಲ್ಲೇಶ್ವರ, ಇಂದಿರಾನಗರ, ಜಯನಗರ, ಬಿಟಿಎಂ ಬಡಾವಣೆ, ಕೋರಮಂಗಲ, ಮೊದಲಾದ ಪ್ರಮುಖ ವಸತಿ ಪ್ರದೇಶಗಳಲ್ಲಿ ಬೀಗಮುದ್ರೆ ಹಾಕುವ ಕಾರ್ಯ ನಡೆಯುವ ಸಾಧ್ಯತೆ ಇದೆ.
ದೆಹಲಿ ಮಾದರಿಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ಪಾಲಿಕೆ ಈಗಾಗಲೇ 30ಕ್ಕೂ ಅಧಿಕ ವಾಣಿಜ್ಯ ಕಟ್ಟಡಗಳಿಗೆ ಬೀಗ ಮುದ್ರೆ ಹಾಕಿದೆ. ಸದ್ಯಕ್ಕೆ ದೆಹಲಿಯಲ್ಲಿ ವ್ಯಕ್ತವಾದಂತಹ ವಿರೋಧ ಕಂಡುಬಂದಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications