ಐಟಿಯ ಆಂಧ್ರಯಾನ : ಇನ್ಫೋಸಿಸ್ ಹಾದಿಯಲ್ಲಿ ವಿಪ್ರೊ?
ಐಟಿಯ ಆಂಧ್ರಯಾನ : ಇನ್ಫೋಸಿಸ್ ಹಾದಿಯಲ್ಲಿ ವಿಪ್ರೊ?
ಆಂಧ್ರ ಮುಖ್ಯಮಂತ್ರಿ ವೈಎಸ್‌ಆರ್ ಜೊತೆ ಪ್ರೇಮ್‌ಜಿ ಮಾತುಕತೆ
ಆಂಧ್ರಪ್ರದೇಶ ಮುಖ್ಯಮಂತ್ರಿ ಡಾ.ವೈ.ಎಸ್.ರಾಜಶೇಖರರೆಡ್ಡಿ ಅವರನ್ನು ಭೇಟಿ ಮಾಡಿರುವ ವಿಪ್ರೊ ಅಧ್ಯಕ್ಷ ಅಜೀಮ್ ಪ್ರೇಮ್‌ಜಿ, ಆಂಧ್ರದಲ್ಲಿ ಬಂಡವಾಳ ಹೂಡಿಕೆಗೆ ಹಿತಕರ ವಾತಾವರಣ ಸೃಷ್ಟಿಸಿದ್ದೀರಿ ಎಂದು ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ಕಂಪನಿ ವಿಸ್ತರಣೆಗೆ ಹೈದರಾಬಾದಿನಲ್ಲಿ ಭೂಮಿ ಮಂಜೂರು ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಐಟಿ ಕ್ಷೇತ್ರದ ದೈತ್ಯ ಎಂದು ಕರೆಸಿಕೊಳ್ಳುವ ಇನ್ಫೋಸಿಸ್, ಈಗಾಗಲೇ ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿ ಆಂಧ್ರದಲ್ಲಿ ತನ್ನ ವಿಸ್ತರಣಾ ಕಾರ್ಯ ಆರಂಭಿಸಿದೆ. ನಾವ್ಯಾಕೆ ಆಂದ್ರಕ್ಕೆ ಹೋಗಬಾರದು ಎಂಬ ಹಟಕ್ಕೆ ಬಿದ್ದಿರುವ ವಿಪ್ರೊ, ಇದೀಗ ಇನ್ಫೋಸಿಸ್ ಹಾದಿಯನ್ನೇ ತುಳಿದಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಐಟಿ - ಬಿಟಿ











Click it and Unblock the Notifications