ಎಲ್ಲ ರಾಜ್ಯಗಳಲ್ಲೂ ಮೇಲ್ಮನೆ ರಚಿಸಿ : ಕೇಂದ್ರಕ್ಕೆ ಒತ್ತಾಯ

ಎಲ್ಲ ರಾಜ್ಯಗಳಲ್ಲೂ ಮೇಲ್ಮನೆ ರಚಿಸಿ : ಕೇಂದ್ರಕ್ಕೆ ಒತ್ತಾಯ
ನವದೆಹಲಿಗೆ ಶೀಘ್ರದಲ್ಲಿಯೇ ನಿಯೋಗ, ರಾಷ್ಟ್ರಪತಿ, ಪ್ರಧಾನಿ ಜೊತೆ ಮಾತುಕತೆ

ಬೆಂಗಳೂರು : ಎಲ್ಲಾ ರಾಜ್ಯಗಳಲ್ಲೂ ವಿಧಾನ ಪರಿಷತ್ತು ರಚನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಯನ್ನು ಒತ್ತಾಯಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮೇಲ್ಮನೆ ರಚನೆ ವಿಷಯಕ್ಕೆ ಸಂಬಂಧಿಸಿದಂತೆ ನವದೆಹಲಿಗೆ ತೆರಳಿ, ಸಂಬಂಧಿಸಿದವರ ಗಮನ ಸೆಳೆಯಲು ಬುಧವಾರ ವಿಧಾನಪರಿಷತ್ತು ನಿರ್ಣಯ ಅಂಗೀಕರಿಸಿತು.

ಸದನ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಬಸವರಾಜ ಹೊರಟ್ಟಿ, ಶೀಘ್ರದಲ್ಲಿಯೇ ನವದೆಹಲಿಗೆ ನಿಯೋಗ ಕರೆದೊಯ್ಯುವ ಬಗ್ಗೆ ಭರವಸೆ ನೀಡಿದರು.

ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಎಚ್‌.ಕೆ.ಪಾಟೀಲ್‌ ಮಂಗಳವಾರ ಈ ನಿರ್ಣಯಕ್ಕಾಗಿ ಒತ್ತಾಯಿಸಿದ್ದರು. ಆಡಳಿತ ಯಂತ್ರದ ಪರಿಣಾಮಕಾರಿ ಬಳಕೆಗೆ ಮೇಲ್ಮನೆ ಪೂರಕವಾಗಲಿದೆ ಎಂಬ ವಾದವನ್ನು ಅವರು ಮುಂದಿಟ್ಟಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+