ದುರ್ಗಾಂಬಿಕಾ ಜಾತ್ರೆ ಹಿನ್ನೆಲೆ ದಾವಣಗೆರೆಯಲ್ಲಿ ರಕ್ತ ಪ್ರವಾಹ!

ದುರ್ಗಾಂಬಿಕಾ ಜಾತ್ರೆ ಹಿನ್ನೆಲೆ ದಾವಣಗೆರೆಯಲ್ಲಿ ರಕ್ತ ಪ್ರವಾಹ!
25ಸಾವಿರ ಕುರಿ-ಮೇಕೆಗಳು ಅಮ್ಮನಿಗೆ ಸಮರ್ಪಣೆ, ಬೆತ್ತಲೆ ಸೇವೆ

ದಾವಣಗೆರೆ : ನಗರದ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ರಕ್ತದ ಹೊಳೆಯೇ ಹರಿಯಿತು. ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಜನ ಈ ಘಟನೆಗೆ ಸಾಕ್ಷಿಯಾದರು.

ಇಡೀ ನಗರವೇ ಕಸಾಯಿಖಾನೆಯಾದಂತೆ, ಬೀದಿಗಳಲ್ಲಿ ಬುಧವಾರ ಕೋಳಿ, ಕುರಿಗಳ ರುಂಡ ಚೆಂಡಾಡುವ ಕಾಯಕ ಹೆಗ್ಗುಸಿಗ್ಗಿಲ್ಲದೆ ಬುಧವಾರ ನಡೆಯಿತು.

ಸುಮಾರು 5ಕೋಣಗಳು, 25ಸಾವಿರ ಕುರಿ-ಮೇಕೆಗಳು ಸೇರಿದಂತೆ ಸಾವಿರಾರು ಕೋಳಿಗಳು ಜಾತ್ರೆ ನೆಪದಲ್ಲಿ ಬಲಿಯಾದವು. ದೇವಿಗೆ ಹರಕೆ ಸಲ್ಲಿಸುವ ನೆಪದಲ್ಲಿ ಹಸಿದವರ ಹೊಟ್ಟೆಗೆ ಆಹಾರವಾದವು. ಪ್ರಾಣಿ ಬಲಿ ತಡೆಯುವಂತೆ ಆದೇಶ ನೀಡಿದ ಜಿಲ್ಲಾಡಳಿತ, ಕಾಗದಗಳಲ್ಲಿ ಮಾತ್ರ ತನ್ನ ಕೆಲಸ ಮಾಡಿತ್ತು.

ಹರಕೆ ಹೊತ್ತ ಮಹಿಳೆಯರು ಮತ್ತು ಪುರುಷರು ಬೇವುಡುಗೆ ಧರಿಸಿ, ದೇವಿಯ ಕೃಪೆಗೆ ಪಾತ್ರರಾದರು.

ಟೀಕೆಗೆ ಕೊಕ್ಕೆ : ಪ್ರಾಣಿ ಹಿಂಸೆ ಮಹಾಪಾಪ. ಪ್ರಾಣಿಗಳ ಕೊಲ್ಲಬೇಡಿ ಎಂಬ ಪ್ರಾಣಿ ದಯಾ ಸಂಘದ ಮನವಿಗೆ ಅಲ್ಲಿ ಕವಡೆ ಕಾಸಿನ ಕಿಮ್ಮತ್ತಿರಲಿಲ್ಲ. ನಾವು ವರ್ಷಕ್ಕೊ, ಐದು ವರ್ಷಕ್ಕೋ ಇಂತಹ ಹಬ್ಬ ಮಾಡಿದ್ರೆ ನೀವು ಮಧ್ಯ ಬರುವಿರಿ. ರಂಜಾನ್‌, ಬಕ್ರೀದ್‌ ಹಬ್ಬದಲ್ಲಿ ಯಾಕೆ ಸುಮ್ಮನಿರ್ತೀರಾ? ಎಂಬ ಪ್ರಶ್ನೆ ಭಕ್ತ ಸಮುದಾಯದಿಂದ ಕೇಳಿ ಬಂತು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+