ಕಿಲೋ ಟೊಮೆಟೊಗೆ 40ಪೈಸೆ : ಕೋಲಾರ ರೈತರ ಗೋಳು
ಕಿಲೋ ಟೊಮೆಟೊಗೆ 40ಪೈಸೆ : ಕೋಲಾರ ರೈತರ ಗೋಳು
ಎಚ್.ಡಿ.ಕೋಟೆ ಟೊಮೆಟೊ ದಾಸೋಹ! ಜೂಜಾಟದ ಬೆಳೆಯಾಂದಿಗೆ ರೈತರ ಪಯಣ!
ಕೇವಲ 40ಪೈಸೆಗೆ ಕಿಲೋ ಅಂದರೂ ಟೊಮೆಟೊಗೆ ಅಂತಹ ಬೇಡಿಕೆಯಿಲ್ಲ. ರಾಶಿರಾಶಿ ಟೊಮೆಟೋ ನಗರದ ಮಾರುಕಟ್ಟೆಯಲ್ಲಿ ಬಿದ್ದಿದೆ. ಕೆಲವು ರೈತರಂತೂ ಜಿಗುಪ್ಸೆಯಿಂದ ಬೆಳೆದ ಟೊಮೆಟೊವನ್ನು ಚರಂಡಿಗೆ ಸುರಿದಿದ್ದಾರೆ.
ಕಳೆದ ವರ್ಷ ಇದೇ ಅವಧಿಯಲ್ಲಿ 1ರೂ.ಗೆ ಕಿಲೋದಂತೆ ಟೊಮೆಟೊ ಮಾರಾಟವಾಗಿತ್ತು. ಕಳೆದ ವರ್ಷದ ಜೂನ್‌ನಲ್ಲಿ 25ಪೈಸೆಗೆ ಇಳಿದು, ರೈತರನ್ನು ಟೊಮೆಟೊ ಇಕ್ಕಟ್ಟಿಗೆ ಸಿಲುಕಿಸಿತ್ತು. ನಂತರ ದೀಪಾವಳಿ ಹೊತ್ತಿಗೆ ಟೊಮೆಟೋ ಕಿಲೋಗೆ ರೂ.30 ಆಗಿ ಗ್ರಾಹಕರನ್ನು ಪೇಚಿಗೆ ಸಿಲುಕಿಸಿತ್ತು.
ಎಚ್.ಡಿ.ಕೋಟೆಯಲ್ಲೂ ಅದೇ ಕತೆ : ಬೆಲೆ ಇಳಿಕೆಯಿಂದ ರೋಸಿ ಹೋದ ಇಲ್ಲಿನ ರೈತರು, ನಾಲ್ಕು ಸಾವಿರ ಕೆ.ಜಿ.ಟೊಮೆಟೊಗಳನ್ನು ಗ್ರಾಹಕರಿಗೆ ಉಚಿತವಾಗಿ ವಿತರಿಸಿ, ತಮ್ಮ ನೋವನ್ನು ಹಂಚಿಕೊಂಡರು. ಪಟ್ಟಣದ ನಿವಾಸಿಗಳು ಟೊಮೆಟೊ ಪಡೆಯಲು ಮುಗಿಬಿದ್ದರು. ಪರಿಣಾಮವಾಗಿ 30 ನಿಮಿಷದಲ್ಲಿ 4 ಸಾವಿರ ಕೆ.ಜಿ.ಟೊಮೆಟೊ ಖಾಲಿಯಾಯಿತು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications