ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಡ್ನಿಯಲ್ಲಿದ್ದ 130ಕಲ್ಲುಗಳ ಮುಕ್ತಿಧಾತನಿಗೆ ಗಿನ್ನಿಸ್‌ ಗರಿ

By Staff
|
Google Oneindia Kannada News

ಕಿಡ್ನಿಯಲ್ಲಿದ್ದ 130ಕಲ್ಲುಗಳ ಮುಕ್ತಿಧಾತನಿಗೆ ಗಿನ್ನಿಸ್‌ ಗರಿ
ಗುಲ್ಬರ್ಗ ವೈದ್ಯ ದೀಪಕ್‌ ಬೋಳಬಂಡಿಯಿಂದ ಎಷ್ಟೋ ಮಂದಿಯ ಹೊಟ್ಟೆನೋವಿಗೆ ಮುಕ್ತಿ

ಗುಲ್ಬರ್ಗ : ಕಿಡ್ನಿಯಲ್ಲಿದ್ದ 130 ಹರಳುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ, ಗುಲ್ಬರ್ಗದ ಯುರಾಲಜಿಸ್ಟ್‌ ಡಾ.ದೀಪಕ್‌ ಬೋಳಬಂಡಿ ಅವರ ಹೆಸರು ಗಿನ್ನಿಸ್‌ ದಾಖಲೆಯ ಪುಟಗಳನ್ನು ಸೇರಿದೆ.

2004ರ ಜೂನ್‌ನಲ್ಲಿ ಯಾದಗಿರಿ ತಾಲೂಕಿನ ಮೊಹ್ಮದ್‌ ಇರ್ಫಾನ್‌(18) ಎಂಬ ಬಾಲಕನ ಬಲ ಕಿಡ್ನಿಯಲ್ಲಿದ್ದ ಈ ಕಲ್ಲುಗಳನ್ನು ಹೊರತೆಗೆದು, ಆತನ ಸಮಸ್ಯೆಯನ್ನು ನಿವಾರಿಸಿದ್ದರು. ರಾಯಚೂರಿನ ಓಪೆಕ್‌ ಆಸ್ಪತ್ರೆಯಲ್ಲಿ ಈ ಯಶಸ್ವಿ ಕಾರ್ಯವನ್ನು ದೀಪಕ್‌ ಬೋಳಬಂಡಿ ನಿರ್ವಹಿಸಿದ್ದರು.

ಗುಲ್ಪರ್ಗ ಮೂಲದ ವೈದ್ಯ ದೀಪಕ್‌ ಬೋಳಬಂಡಿ ಗಿನ್ನಿಸ್‌ ಸೇರುವ ಮೂಲಕ, ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ. ಸುಮಾರು ಮೂರು ವರ್ಷದ ಮಗುವಿನಿಂದ 90ವರ್ಷದ ವೃದ್ಧರ ಕಿಡ್ನಿ ಹರಳುಗಳನ್ನು ಹೊರತೆಗೆದಿರುವ ಹೆಗ್ಗಳಿಕೆಯೂ ಅವರಿಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X