ನಗರದಲ್ಲಿ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭ

ನಗರದಲ್ಲಿ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭ
ವೆಂಕಟಸುಬ್ಬಯ್ಯ, ಡಾ.ಸಿದ್ದಲಿಂಗಯ್ಯ, ವಿಶ್ವೇಶ್ವರ ಭಟ್‌ ಸೇರಿದಂತೆ ವಿವಿಧ ಗಣ್ಯರಿಗೆ ಆರ್ಯಭಟ ಪ್ರಶಸ್ತಿ

ಬೆಂಗಳೂರು : ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ ತ್ರಿದಶಮಾನೋತ್ಸವ ಸಮಾರಂಭವನ್ನು ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದೆ. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಗಣ್ಯರಿಗೆ ಹಾಗೂ ಕಿರುತೆರೆಯ ಶ್ರೇಷ್ಠರಿಗೆ ಪ್ರಶಸ್ತಿ ವಿತರಣೆಯೂ ನಡೆಯಲಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5-00 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್‌ ಸಭಾಪತಿ ವಿ.ಆರ್‌.ಸುದರ್ಶನ್‌ ಉದ್ಘಾಟಿಸಲಿದ್ದಾರೆ.

ಸಚಿವ ಪಿ.ಜಿ.ಆರ್‌.ಸಿಂಧ್ಯಾ, ಖ್ಯಾತ ಅಭಿನೇತ್ರಿ ಬಿ.ಸರೋಜಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮುದ್ದುಮೋಹನ್‌ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳವರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ್‌ ಪಾಟೀಲ್‌ ಸಮಾರಂಭದ ಅಧ್ಯಕ್ಷತೆವಹಿಸುವರು.

ಪ್ರೊ. ಜಿ. ವೆಂಕಟಸುಬ್ಬಯ್ಯ, ಶೈಲಜಾ ಸಂತೋಷ್‌, ಡಾ. ಸಿದ್ಧಲಿಂಗಯ್ಯ, ಪ್ರೇಮಾ ಭಟ್‌, ಡಾ.ಟಿ.ಸಿ.ಪೂರ್ಣಿಮಾ, ಸಿ.ಎಸ್‌.ಬೋಪಯ್ಯ, ಪ್ರೊ.ಜಯಪ್ರಕಾಶ ಬರಗೂರು, ಡಾ.ಜೆ.ಶಶಿಧರಪ್ರಸಾದ್‌, ಪ್ರೊ.ಕೆ.ಎಂ.ಕೃಷ್ಣೇಗೌಡ, ಡಾ. ಕಾಮಿನಿ.ಎ.ರಾವ್‌, ಡಾ.ಸುನಂದಾ.ಕುಲಕರ್ಣಿ, ವಿಶ್ವೇಶ್ವರ ಭಟ್‌, ಸುರೇಶ್‌ ಮೂನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಈ ಸಂದರ್ಭದಲ್ಲಿ ಗೌರವಿಸಿ ಪ್ರಶಸ್ತಿ ನೀಡಲಾಗುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+