ಚಿನ್ನ ಕೊಳ್ಳಿ-ಬಹುಮಾನ ಗೆಲ್ಲಿ : ಸುವರ್ಣ ಉತ್ಸವ

ಚಿನ್ನ ಕೊಳ್ಳಿ-ಬಹುಮಾನ ಗೆಲ್ಲಿ : ಸುವರ್ಣ ಉತ್ಸವ
ರಾಜ್ಯದೆಲ್ಲೆಡೆ ಮೇ.25ರವರೆಗೆ ಸುವರ್ಣ ಉತ್ಸವ, ಅದೃಷ್ಟ ಪರೀಕ್ಷೆಗೆ ಸಕಾಲ!

ಬೆಂಗಳೂರು : ಕರ್ನಾಟಕ ಸುವರ್ಣ ಉತ್ಸವ-2005ನ್ನು ಏಪ್ರಿಲ್‌ 4ರಿಂದ ಮೇ 25ರವರೆಗೆ ರಾಜ್ಯದೆಲ್ಲೆಡೆ ಆಚರಿಸಲಾಗುವುದೆಂದು ವಿಶ್ವ ಚಿನ್ನ ಮಂಡಳಿಯ ಉಪಾಧ್ಯಕ್ಷ ಕೆ.ಶಿವರಾಂ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಬ್ಬ-ಮದುವೆ ಸಂಭ್ರಮಗಳಲ್ಲಿ ರೂ 2000 ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಸುವವರು ಅದೃಷ್ಟದ ಡ್ರಾ ಕೂಪನ್‌ ಪಡೆಯುತ್ತಾರೆ. ಡ್ರಾ ವಿಜೇತರಿಗೆ ಐದು ಕೆ.ಜಿ. ಚಿನ್ನ ಬಹುಮಾನ ರೂಪದಲ್ಲಿ ದೊರಕಲಿದೆ ಎಂದರು.

1ಕೆ.ಜಿ. ಬಂಪರ್‌ ಬಹುಮಾನವನ್ನು ಘೋಷಿಸಲಾಗಿದ್ದು, ಒಟ್ಟು 246 ಅದೃಷ್ಟ ಡ್ರಾಗಳು ನಡೆಯಲಿದೆ. ಅಲ್ಲದೇ ಅದೃಷ್ಟಶಾಲಿ ಐದು ಜೋಡಿಗಳಿಗೆ ಮಲೇಷ್ಯ ಪ್ರವಾಸವನ್ನು ಕಲ್ಪಿಸಲಾಗಿದೆ. ಈ ಉತ್ಸವಕ್ಕೆ ಪ್ರಚಾರದ ಹೊಣೆಗಾರಿಕೆಯನ್ನು ಖ್ಯಾತ ನಟಿ ಮತ್ತು ಸಂಗೀತಗಾರ್ತಿ ವಸುಂದರಾ ದಾಸ್‌ ವಹಿಸಿಕೊಂಡಿದ್ದಾರೆ ಎಂದು ಕೆ.ಶಿವರಾಂ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+