ಹೈಕೋಟ್‌ ಸಂಚಾರಿ ಪೀಠ ಸ್ಥಾಪನೆಗೆ ಸ್ಥಳ ಪರಿಶೀಲನೆ

ಹೈಕೋಟ್‌ ಸಂಚಾರಿ ಪೀಠ ಸ್ಥಾಪನೆಗೆ ಸ್ಥಳ ಪರಿಶೀಲನೆ
ಉತ್ತರ ಕರ್ನಾಟಕದಲ್ಲಿ ಸಂಚಾರಿ ಪೀಠಕ್ಕಾಗಿ 20ಕೋಟಿ ಮೀಸಲಿಡಲಾಗಿದೆ -ಬಸವರಾಜ ಹೊರಟ್ಟಿ

ಧಾರವಾಡ : ನ್ಯಾಯಮೂರ್ತಿ ಎಸ್‌. ಆರ್‌.ನಾಯಕ್‌ ನೇತೃತ್ವದ ನ್ಯಾಯಮೂರ್ತಿಗಳ ನಿಯೋಗವು ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪನೆಯ ಸಲುವಾಗಿ ಶನಿವಾರ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಸ್ಥಳ ಪರಿಶೀಲನೆ ನಡೆಸಿತು.

ನಗರದಿಂದ 10 ಕಿ.ಮೀ.ದೂರವಿರುವ ಭೂ ಮತ್ತು ಜಲ ನಿರ್ವಹಣಾ ಸಂಸ್ಥೆಯ ಕಟ್ಟಡವನ್ನು ಈ ಸಂದರ್ಭದಲ್ಲಿ ವೀಕ್ಷಿಸಲಾಯಿತು. ನಿಯೋಗವು ಸ್ಥಳ ಪರಿಶೀಲನೆಗಾಗಿ ಗುಲ್ಬರ್ಗ ನಗರಕ್ಕೂ ತೆರಳುವ ಕಾರ್ಯಕ್ರಮವಿದೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ನಾಯಕ್‌ ಅವರು, ಸದ್ಯಕ್ಕೆ ಈ ಕಟ್ಟಡವನ್ನು ನಮಗೆ ತೋರಿಸಲಾಗಿದೆ. ಈಗಲೇ ಈ ಕುರಿತು ಏನನ್ನೂ ಹೇಳಲಾರೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಣ್ಣ ಉಳಿತಾಯ, ಲಾಟರಿ ಮತ್ತು ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವ ಬಸವರಾಜ ಹೊರಟ್ಟಿ , ಸಂಚಾರಿ ಪೀಠಕ್ಕೆ 11ಸಭಾಂಗಣಗಳ ಅಗತ್ಯವಿದೆ. ಈ ಸ್ಥಳವನ್ನು ನಿಯೋಗವು ಶಿಫಾರಸು ಮಾಡಿದರೆ ಸರ್ಕಾವು ಎಲ್ಲ ಸೌಲಭ್ಯಗಳನ್ನೂ ಒದಗಿಸಲಿದೆ ಎಂದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಂಚಾರಿ ಪೀಠಕ್ಕಾಗಿಯೇ 20ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಹೆಚ್ಚಿನ ನೆರವು ಅಗತ್ಯವೆನಿಸಿದರೆ ನೀಡುವುದಾಗಿ ಮುಖ್ಯಮಂತ್ರಿ ಧರ್ಮಸಿಂಗ್‌ ಭರವಸೆ ನೀಡಿದ್ದಾರೆ ಎಂದು ಹೊರಟ್ಟಿ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+