ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಲಘು ಕಂಪನ!
ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ ಲಘು ಕಂಪನ!
ಸಾರ್ವಜನಿಕರಲ್ಲಿ ಆತಂಕ, ಯಾವುದೇ ಅನಾಹುತ ಸಂಭವಿಸಿಲ್ಲ.
ಕೆಲವು ನಿಮಿಷಗಳ ಕಾಲ ಭೂಮಿ ಕಂಪಿಸಿದ್ದರಿಂದ ಮನೆಯಲ್ಲಿದ್ದ ಪೀಠೋಪಕರಣಗಳು ಅಲುಗಾಡಿದ ಅನುಭವದಿಂದ ಗಾಭರಿಗೊಂಡ ನಾಗರೀಕರು ಮನೆಬಿಟ್ಟು ಹೊರಗಡೆ ಓಡಿ ಬಂದರು. ಭಯಭೀತರಾದ ಅಲ್ಲಿನ ನಿವಾಸಿಗಳು ತಮಗಾದ ಅನುಭವವನ್ನು ಪತ್ರಿಕಾ ಕಚೇರಿ ಮತ್ತು ಪೋಲೀಸರಿಗೆ ದೂರವಾಣಿ ಮೂಲಕ ವಿವರಿಸಿದ್ದಾರೆ. ಲಘು ಭೂಕಂಪನದಿಂದ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications