ತಿರುಪತಿಗೆ ಕೆಎಸ್‌ಟಿಡಿಸಿಯಿಂದ ಪ್ಯಾಕೇಜ್‌ ಪ್ರವಾಸ

ತಿರುಪತಿಗೆ ಕೆಎಸ್‌ಟಿಡಿಸಿಯಿಂದ ಪ್ಯಾಕೇಜ್‌ ಪ್ರವಾಸ
ಪ್ರವಾಸೋದ್ಯಮ ಅಭಿವೃದ್ಧಿಗೆ ನಾನಾ ಪ್ಯಾಕೇಜ್‌ಗಳ ಆಕರ್ಷಣೆ

ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಗಮ(ಕೆಎಸ್‌ಟಿಡಿಸಿ) ಪ್ರವಾಸಿಗರ ಆಕರ್ಷಿಸಲು ವಿಶೇಷ ಪ್ಯಾಕೇಜ್‌ ಪ್ರವಾಸಗಳಿಗೆ ಚಾಲನೆ ನೀಡಿದೆ.

ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ವಿಶೇಷ ಪ್ಯಾಕೇಜ್‌ ಪ್ರಕಟಿಸಿರುವ ಕೆಎಸ್‌ಟಿಡಿಸಿ, ಎರಡು ವೋಲ್ವೊ ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ಈ ಪ್ಯಾಕೇಜ್‌ ಅನ್ವಯ ಒಬ್ಬರಿಗೆ 1035ರೂ.ಗಳನ್ನು ನಿಗದಿಪಡಿಸಲಾಗಿದೆ. ಪ್ಯಾಕೇಜ್‌ ಸೇವೆ ವಾರದ ಐದು ದಿನಗಳು ಲಭ್ಯ.

ಪ್ರತಿ ರಾತ್ರಿ 10.30ಕ್ಕೆ ಬೆಂಗಳೂರು ಬಿಡುವ ಈ ಪ್ಯಾಕೇಜ್‌ನ ವೋಲ್ವೋ ಬಸ್‌, ಮಧ್ಯರಾತ್ರಿ 3ಗಂಟೆಗೆ ತಿರುಪತಿ ತಲುಪಲಿದೆ. ಅಲ್ಲಿ ಮೂರರಿಂದ ನಾಲ್ಕುಗಂಟೆಗಳ ಕಾಲ ತಂಗಲು ಹೋಟೆಲ್‌ ವ್ಯವಸ್ಥೆಯನ್ನು ಕೆಎಸ್‌ಡಿಟಿಸಿಯೇ ಮಾಡಲಿದೆ. ಅಲ್ಲಿಂದ ಬೆಳಿಗ್ಗೆ 12ಗಂಟೆಗೆ ಹೊರಟು ಸಂಜೆ 4.30ಕ್ಕೆ ಬಸ್‌ ಬೆಂಗಳೂರಿಗೆ ಹಿಂದಿರುಗಲಿದೆ.

ಪ್ಯಾಕೇಜ್‌ ಪ್ರಯಾಣಿಕರಿಗೆ ಹೋಟೆಲ್‌ನಲ್ಲಿ ತಂಗುವ, ಬಾಲಾಜಿ ದರ್ಶನ ಮಾಡಿಸುವ ಜವಬ್ದಾರಿಯನ್ನು ಹೊತ್ತಿರುವ ಕೆಎಸ್‌ಟಿಡಿಸಿ, ತನ್ನ ಪ್ಯಾಕೇಜ್‌ನಲ್ಲಿ ಲಡ್ಡು ಪ್ರಸಾದವನ್ನು ಸಹಾ ನೀಡಲಿದೆ.

ಇತರೇ ಪ್ಯಾಕೇಜ್‌ : ಹತ್ತು ದಿನಗಳ ಪ್ರವಾಸ ಪ್ಯಾಕೇಜ್‌ನಲ್ಲಿ ಹೈದರಾಬಾದ್‌, ರಾಮೋಜಿರಾವ್‌ ಫಿಲಂ ಸಿಟಿ, ಔರಂಗಾಬಾದ್‌, ಅಜಂತ-ಎಲ್ಲೋರ, ನಾಸಿಕ್‌, ಶಿರಡಿ, ಮಹಾಬಲೇಶ್ವರ, ಕೊಲ್ಲಾಪುರ, ಮುಂಬೈ ಸೇರಿದಂತೆ ವಿವಿಧ ಪ್ರವಾಸಿ ಕೇಂದ್ರಗಳನ್ನು ವೋಲ್ವೊ ಬಸ್‌ನಲ್ಲಿ ಸಂದರ್ಶಿಸಲು ಅವಕಾಶವಿದೆ. ಏಪ್ರಿಲ್‌ನಲ್ಲಿ ಈ ಪ್ರವಾಸ ಆರಂಭವಾಗಲಿದೆ. ಟಿಕೇಟ್‌ ದರ 13,100(ಪ್ರವಾಸದಲ್ಲಿ ಉಚಿತವಾಗಿ ವಸತಿ,ಊಟ ಕಲ್ಪಿಸಲಾಗುತ್ತದೆ)

ಎರಡು ದಿನಗಳ ಮತ್ತೊಂದು ಪ್ಯಾಕೇಜ್‌ ಪ್ರವಾಸದಲ್ಲಿ ರೂ.5.750ಪಾವತಿಸಿ, ಶಿರಡಿ, ನಾಸಿಕ್‌, ಪಂಡರಾಪುರ, ಕೊಲ್ಲಾಪುರಗಳನ್ನು ವೋಲ್ವೋ ಬಸ್‌ನಲ್ಲಿ ಸಂದರ್ಶಿಸಬಹುದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+