ಡಾ.ಮೀನಾ ಚಂದಾವರ್ಕರ್‌- ಪರಿಪೂರ್ಣ ಮಹಿಳೆ

ಡಾ.ಮೀನಾ ಚಂದಾವರ್ಕರ್‌- ಪರಿಪೂರ್ಣ ಮಹಿಳೆ
ಮಾಜಿ ರಾಜ್ಯಪಾಲೆ ರಮಾದೇವಿಯಿಂದ ಈ-ಟಿ.ವಿ ಸೋಲರೈಸರ್‌ ಪ್ರಶಸ್ತಿ ಪ್ರದಾನ

ಬೆಂಗಳೂರು : ಪ್ರಸಕ್ತ ಸಾಲಿನ ಈ-ಟಿ.ವಿ ಕನ್ನಡವಾಹಿನಿಯ ಸೋಲರೈಸರ್‌ ಪರಿಪೂರ್ಣ ಮಹಿಳೆ ಗೌರವಕ್ಕೆ ಬಾಗಲಕೋಟೆಯ ಡಾ.ಮೀನಾ ಚಂದಾವರ್ಕರ್‌ ಅವರು ಪಾತ್ರರಾಗಿದ್ದಾರೆ.

ನಗರದ ಸೆಂಟ್ರಲ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಪಾಲೆ ವಿ.ಎಸ್‌.ರಮಾದೇವಿ ಪ್ರಶಸ್ತಿಯನ್ನು ವಿತರಿಸಿದರು.

ಸ್ಪರ್ಧೆಗೆ ರಾಜ್ಯದ ಮೂಲೆಮೂಲೆಗಳಿಂದ ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಉಮೇದುವಾರಿಕೆ ಸಲ್ಲಿಸಿದ್ದರು. ಅಂತಿಮ ಸುತ್ತಿನಲ್ಲಿ ಹದಿಮೂರು ಮಂದಿಯನ್ನು ಆಯ್ಕೆ ಮಾಡಿ, ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ತಮ್ಮ ವೈಶಿಷ್ಟ್ಯಗಳಿಂದ ನಿರ್ಣಾಯಕರನ್ನ ಸೆಳೆದ ಡಾ.ಮೀನಾ ಚಂದಾವರ್ಕರ್‌ ಪ್ರಶಸ್ತಿಗೆ ಆಯ್ಕೆಗೊಂಡರು.

ಹಿರಿಯ ರಂಗ ಕಲಾವಿದೆ ಜಿ.ವಿ. ಮಾಲತಮ್ಮ, ಲೇಖಕಿ ಶಾಂತಾದೇವಿ ಕಣವಿ, ನಟಿ ಎಂ.ಲೀಲಾವತಿ, ಕ್ರಿಕೆಟ್‌ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಲೇಖಕಿ ಪ್ರತಿಭಾನಂದಕುಮಾರ್‌, ಕಳೆದ ವರ್ಷದ ಪ್ರಶಸ್ತಿ ವಿಜೇತೆ ಡಾ.ಪವಿತ್ರ, ನಟಿ ಪ್ರೇಮಾ, ವಿನಯಪ್ರಸಾದ್‌, ಅಭಿನಯ, ಸೋಲರೈಸರ್‌ ನಿರ್ದೇಶಕಿ ಶುಭಾ, ಈ-ಟಿ.ವಿಯ ಸುಬ್ಬಾನಾಯ್ಡು, ಎಸ್‌.ಸುರೇಂದ್ರನಾಥ್‌ ಮತ್ತಿತರರು ಪಾಲ್ಗೊಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+