ಕೂಡಲಸಂಗಮದಲ್ಲಿ ಜನವರಿ 11ರಿಂದ ಶರಣರ ವಾರ್ಷಿಕ ಚಿಲಿಪಿಲಿ
ಕೂಡಲಸಂಗಮದಲ್ಲಿ ಜನವರಿ 11ರಿಂದ ಶರಣರ ವಾರ್ಷಿಕ ಚಿಲಿಪಿಲಿ
ಮಾತೆ ಮಹಾದೇವಿ ನೇತೃತ್ವದಲ್ಲಿ 18ನೇ ಶರಣ ಮೇಳ
ಈ ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಕುರಿತಂತೆ ಸಮ್ಮೇಳನದಲ್ಲಿ ಮುಕ್ತ ಚಿಂತನಗೋಷ್ಠಿ ನಡೆಯಲಿದೆ. ಧಾರ್ಮಿಕ ರಸ ಪ್ರಶ್ನೆ ಸ್ಪರ್ಧೆ, ಮಹಾಧಿವೇಶನ, ಧರ್ಮ ಮತ್ತು ವೈಚಾರಿಕತೆ ಕುರಿತು ವಿಶೇಷ ಚಿಂತನಗೋಷ್ಠಿಗಳು ನಡೆಯಲಿದೆ ಎಂದು ಶರಣ ಮೇಳ ಉತ್ಸವ ಸಮಿತಿ ಕಾರ್ಯಾಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ.
ಶರಣ ಮೇಳದ ಧಾರ್ಮಿಕ ವಿಧಿಯಾದ ವಚನ ಪಠಣ ಸಪ್ತಾಹವು ಜನವರಿ 9 ರಂದು ಆರಂಭವಾಗಲಿದ್ದು, ಜನವರಿ 16ರಂದು ಮುಕ್ತಾಯಗೊಳ್ಳಲಿದೆ. ಈ ಮೇಳದಲ್ಲಿ ಅಲ್ಲಮ ಪ್ರಭುದೇವ, ಸಿದ್ಧರಾಮೇಶ್ವರ, ಚನ್ನಬಸವಣ್ಣ ಅವರ ವಚನಗಳ ಧ್ವನಿ ಸುರುಳಿ ಮತ್ತು ಸಿಡಿ, ನೂತನ ವಾರ್ಷಿಕ ಕ್ಯಾಲೆಂಡರ್, ಬಸವಣ್ಣ ಅವರ ಚಿತ್ರವಿರುವ 10 ಗ್ರಾಮ್‌ನ ಬೆಳ್ಳಿ ನಾಣ್ಯಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಮಹಾದೇವಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications