ಸರಕಾರಿ ಕಚೇರಿ ಮೇಲೆ ದಾಳಿ ಮಾಡುವುದಿಲ್ಲ - ಉಪ ಲೋಕಾಯುಕ್ತ
ಸರಕಾರಿ ಕಚೇರಿ ಮೇಲೆ ದಾಳಿ ಮಾಡುವುದಿಲ್ಲ - ಉಪ ಲೋಕಾಯುಕ್ತ
ಲೋಕಾಯುಕ್ತ ವೆಂಕಟಾಚಲರ ಅಧಿಕಾರ ಮೊಟಕು, ಧರ್ಮ ಸರಕಾರದ ನೀತಿ
ನಗರದ ರಾಜಭವನದಲ್ಲಿ ಡಿ.29ರ ಬುಧವಾರ ರಾಜ್ಯಪಾಲ ಚತುರ್ವೇದಿಯವರಿಂದ, ಉಪಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾನು ಪೋಲೀಸ್ ಅಧಿಕಾರಿಯಲ್ಲ. ಹೀಗಾಗಿ ಸರಕಾರಿ ಕಚೇರಿ ಮೇಲೆ ದಾಳಿಯನ್ನು ಕೈಗೊಳ್ಳುವುದಿಲ್ಲ. ನಾನು ಕೇವಲ ಅಧಿಕಾರಿಗಳ ಭ್ರಷ್ಟಚಾರದ ಬಗೆಗೆ ಪರಿವೀಕ್ಷಿಸುತ್ತೇನೆ. ದೂರುಗಳು ಬಂದರೆ ತನಿಖೆ ಕೈಗೊಳ್ಳುತ್ತೇನೆ. ಒಳ್ಳೆಯ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತೇನೆ ಎಂದು ಬಸವನಗೌಡ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಮಾತನಾಡಿ, ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವ ಪ್ರಸ್ತಾವನೆಯನ್ನು ಮುಂದಿನ ಸಂಪುಟ ಸಭೆಯಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷ ಕೃಷ್ಣ, ಡಾ.ಹೆಚ್.ಸುದರ್ಶನ್, ಲೋಕಾಯುಕ್ತ ನಿರ್ದೇಶಕ ಎಂ.ಡಿ. ಸಿಂಗ್ ಮತ್ತಿತರರು ಹಾಜರಿದ್ದರು.
ಲೋಕಾಯುಕ್ತ ಎನ್. ವೆಂಕಟಾಚಲ ಅವರ ಗೈರು ಹಾಜರಿ ಎದ್ದು ಕಾಣುತ್ತಿದ್ದು. ಅವರು ಸರಕಾರಿ ಕೆಲಸದ ಮೇಲೆ ದೆಹಲಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಕೊಸರು: ಸರಕಾರಿ ಕಚೇರಿಗಳ ಮೇಲೆ ದಿಢೀರ್ ದಾಳಿ ಮಾಡಿ, ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದ ಲೋಕಾಯುಕ್ತ ವೆಂಕಟಾಚಲ ಅವರ ಅಧಿಕಾರ ವ್ಯಾಪ್ತಿ ಕಡಿಮೆಯಾಗಿದೆ. ಈ ನಡುವೆ ಉಪಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಸವನಗೌಡರ ಹೇಳಿಕೆ(ಸರಕಾರಿ ಕಚೇರಿಗಳ ಮೇಲೆ ದಾಳಿ ನಡೆಸುವುದಿಲ್ಲ...) ಅಧಿಕಾರಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ!
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications