ಸುನಾಮಿಗೆ ರಾಜ್ಯದ 86 ಮಂದಿ ಬಲಿ, ಮೃತರ ಕುಟುಂಬಕ್ಕೆ 1ಲಕ್ಷ ನೆರವು
ಸುನಾಮಿಗೆ ರಾಜ್ಯದ 86 ಮಂದಿ ಬಲಿ, ಮೃತರ ಕುಟುಂಬಕ್ಕೆ 1ಲಕ್ಷ ನೆರವು
ರಾಜ್ಯ ಸರಕಾರದಿಂದ 15 ಕೋಟಿ ನೆರವು, ಸಿದ್ಧ ಆಹಾರ ಪದಾರ್ಥಗಳ ರವಾನೆ, 5000 ನಿರಾಶ್ರಿತರು
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ ಜೊತೆಗೆ ಸರಕಾರಿ ನೌಕರರು ತಮ್ಮ ಒಂದು ದಿನದ ವೇತನ ನೀಡುವ ನಿರೀಕ್ಷೆಯಿದೆ. ನೌಕರರ ವೇತನದಿಂದ ಸುಮಾರು 14 ಕೋಟಿ ಸಂಗ್ರಹವಾಗಲಿದೆ ಎಂದರು.
ರಾಜ್ಯ ಸರಕಾರ 5.5 ಕೋಟಿ ನೆರವನ್ನು ಈಗಾಗಲೇ ಪ್ರಕಟಿಸಿದೆ. ಮಂತ್ರಿಗಳು, ಶಾಸಕರು ತಮ್ಮ ಒಂದು ದಿನದ ವೇತನವನ್ನು ಸಂತ್ರಸ್ಥರಿಗಾಗಿ ನೀಡಿದ್ದಾರೆ. ಸುನಾಮಿ ದುರಂತದಲ್ಲಿ ಸುಮಾರು 86ಮಂದಿ ಕನ್ನಡಿಗರು ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸರಕಾರ ಒಂದು ಲಕ್ಷ ರೂ. ನೆರವು ನೀಡಲಿದೆ ಎಂದರು.
ಕರಾವಳಿ ಜಿಲ್ಲೆಯಲ್ಲಿ ಸುನಾಮಿ ಪರಿಣಾಮ ಸುಮಾರು ಒಂದು ಕೋಟಿ ನಷ್ಟವಾಗಿದೆ. ಸಾಕಷ್ಟು ದೋಣಿಗಳಿಗೆ ಮುರಿದು ಹಾಳಾಗಿವೆ. 5ಸಾವಿರ ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ರಾಜ್ಯ ಸರಕಾರ 22 ಟನ್ ಆಹಾರ ಪದಾರ್ಥಗಳನ್ನು ಈಗಾಗಲೇ ಶ್ರೀಲಂಕಾಕ್ಕೆ ಕಳುಹಿಸಿದೆ ಎಂದು ಧರ್ಮಸಿಂಗ್ ತಿಳಿಸಿದ್ದಾರೆ.
ಸಂತ್ರಸ್ಥರಿಗೆ ಆಹಾರ : ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನದ ಆಧ್ಯಯನ ಸಂಸ್ಥೆ(ಸಿಎಫ್‌ಟಿಆರ್‌ಐ) ‘ಆಪರೇಷನ್ ಫುಡ್’ಗೆ ಚಾಲನೆ ನೀಡಿದೆ.
ಸುಮಾರು 50 ಸಾವಿರ ಮಂದಿಗೆ ಸಾಕಾಗುವಷ್ಟು ಆಹಾರ ಪದಾರ್ಥಗಳನ್ನು ಸಿದ್ಧ ಪಡಿಸಲಿದೆ. ಸಿದ್ದ ಆಹಾರ ಪದಾರ್ಥ(ಅನ್ನ, ಸಾಂಬರ್, ಬಿಸಿಬೇಳೆ ಬಾತ್, ಫೋಂಗಲ್, ಉಪ್ಪಿಟ್ಟು , ಬಿಸ್ಕಟ್ ಇತ್ಯಾದಿ) ಮತ್ತು ತಂಪಾದ ಹಾಲಿನ ಪ್ಯಾಕೇಟ್‌ಗಳನ್ನು ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಿಗೆ ಸಂಸ್ಥೆ ಬುಧವಾರ ರವಾನಿಸಿದೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications