ಸರಕಾರಿ ಆಸ್ಪತ್ರೆಗಳ ಆರೋಗ್ಯ ಕಾಯಲು ವಿಶ್ವಬ್ಯಾಂಕ್‌ನಿಂದ 700 ಕೋಟಿ
ಸರಕಾರಿ ಆಸ್ಪತ್ರೆಗಳ ಆರೋಗ್ಯ ಕಾಯಲು ವಿಶ್ವಬ್ಯಾಂಕ್‌ನಿಂದ 700 ಕೋಟಿ
ಶೇ.70ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ-ಚಲುವ ನಾರಾಯಣ ಸ್ವಾಮಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಬ್ಯಾಂಕ್‌ನ ಹಣದಲ್ಲಿ 50 ಕೋಟಿಯನ್ನು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಹಾಗೂ 650 ಕೋಟಿಗಳನ್ನು ಉಪಕರಣಗಳ ಖರೀದಿಗೆ ವೆಚ್ಚ ಮಾಡುವುದಾಗಿ ಹೇಳಿದರು.
ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸಿಟಿಸ್ಕ್ಯಾನ್ ಅಳವಡಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಇದರ ಪರಿಣಾಮ ತಲೆಗೆ ಗಂಭೀರ ಗಾಯಗೊಂಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿಯೇ ಪರೀಕ್ಷೆ ನಡೆಸಬಹುದಾಗಿದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶೇ.70ರಷ್ಟು ಕಡೆ ವೈದ್ಯರಿಲ್ಲ. ಹೀಗಾಗಿ ಜನವರಿ 15ರೊಳಗೆ ವೈದ್ಯರು, ಎಕ್ಸ್‌ರೇ ತಂತ್ರಜ್ಞರು, ಲ್ಯಾಬ್ ತಂತ್ರಜ್ಞರು, ನರ್ಸ್‌ಗಳು ಸೇರಿದಂತೆ 500ಜನ ಅರೆವೈದ್ಯ ಸಿಬ್ಬಂದಿ ನೇರ ನೇಮಕ ಮಾಡಿಕೊಳ್ಳಲಾಗುವುದು ಎಂದರು.
(ಇನ್ಫೋವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications