ಮುಲಾಯಂ ಸಿಂಗ್‌ ನೇತೃತ್ವದ ಸಮಾಜವಾದಿ ಪಕ್ಷದತ್ತ ಎಸ್‌.ಬಂಗಾರಪ್ಪ ?

ಮುಲಾಯಂ ಸಿಂಗ್‌ ನೇತೃತ್ವದ ಸಮಾಜವಾದಿ ಪಕ್ಷದತ್ತ ಎಸ್‌.ಬಂಗಾರಪ್ಪ ?
ಕುತೂಹಲದಿಂದ ಬಿಜೆಪಿ ಒಳಗೆ ಪ್ರವೇಶಿಸಿದ್ದೆ, ಅಲ್ಲಿ ಏನೂ ಸಹ ಇಲ್ಲ- ಬಂಗಾರಪ್ಪ

ಶಿವಮೊಗ್ಗ : ಪಕ್ಷ ಬದಲಿಸುವಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಎಸ್‌.ಬಂಗಾರಪ್ಪ ಎತ್ತಿದ ಕೈ. ಬಿಜೆಪಿ ಅಧ್ಯಕ್ಷ ಸ್ಥಾನ ದಕ್ಕದ ಹಿನ್ನೆಲೆಯಲ್ಲಿ, ಪಕ್ಷ ತೊರೆದು ಮುಲಾಯಂ ಸಿಂಗ್‌ ಯಾದವ್‌ರ ಸಮಾಜವಾದಿ ಪಕ್ಷ ಸೇರುವ ಅಪರೋಕ್ಷ ಸೂಚನೆ ಈಗ ಸಿಕ್ಕಿದೆ.

ಸೊರಬದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಂಗಾರಪ್ಪ, ರಾಷ್ಟ್ರ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳ ಮುಖಂಡರಾಗಿ ನಾನು ಮತ್ತು ಮುಲಾಯಂ ಸಿಂಗ್‌ ಮಾತ್ರ ಉಳಿದಿದ್ದೇವೆ. ಮುಲಾಯಂ ಸಿಂಗ್‌ ನೇತೃತ್ವದ ಸಮಾಜವಾದಿ ಪಕ್ಷ ಬಡವರು ಹಾಗೂ ದಲಿತರ ಪರ ನಿಂತಿದೆ ಎಂದಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ ಪಕ್ಷವನ್ನು ಮುಂದುವರೆಸಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ. ಎಲ್ಲರು ಬಿಜೆಪಿಯ ಹೊಗಳುವುದನ್ನು ಕಂಡು, ಕುತೂಹಲದಿಂದ ಒಳ ಪ್ರವೇಶಿಸಿ ನೋಡಿದೆ. ಅಲ್ಲಿ ಅಂತಹ ವಿಶೇಷವೇನು ಇಲ್ಲ ಎಂದು ಬಿಜೆಪಿ ಸೇರಿದ ಬಗ್ಗೆ ಅವರು ಖೇದ ವ್ಯಕ್ತಪಡಿಸಿದ್ದಾರೆ.

ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿ ಜೊತೆ ಕುಳಿತು, ರಾಜಕೀಯ ಮಾಡಿದವನು ನಾನು. ನಾನಿನ್ನು ಯಮ. ಮತ್ತೆ ಹುಟ್ಟಿಬರುತ್ತೇನೆ ಎಂದು ಬಂಗಾರಪ್ಪ ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಕಳೆದ ಲೋಕಸಭಾ ಮತ್ತು ವಿಧಾನ ಸಭಾ ಚುನಾವಣೆಗೆ ಮೊದಲು ಪ್ರತಿ ಸಮಾರಂಭದಲ್ಲೂ ಬಿಜೆಪಿ ಮತ್ತು ವಾಜಪೇಯಿ ಅವರನ್ನು ಹೊಗಳುತ್ತಿದ್ದ ಬಂಗಾರಪ್ಪ, ನಂತರ ಬಿಜೆಪಿ ಪ್ರವೇಶಿಸಿದ್ದರು. ಈಗ ಮುಲಯಂ ಸಿಂಗ್‌ ಯಾದವ್‌ ಮತ್ತು ಸಮಾಜವಾದಿ ಪಕ್ಷವನ್ನು ಹೊಗಳತೊಡಗಿದ್ದಾರೆ. ಮುಂದೇನು?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+