ಕೈಗಾರಿಕೆಗಳ ಬೆಳವಣಿಗೆ ಹೆಸರಲ್ಲಿ ವಂಚನೆ- ಹೆಚ್‌.ಡಿ.ದೇವೇಗೌಡ ಕಿಡಿ

ಕೈಗಾರಿಕೆಗಳ ಬೆಳವಣಿಗೆ ಹೆಸರಲ್ಲಿ ವಂಚನೆ- ಹೆಚ್‌.ಡಿ.ದೇವೇಗೌಡ ಕಿಡಿ
ಕಳೆದ ಆರುವರ್ಷಗಳಲ್ಲಿನ ಅಭಿವೃದ್ಧಿ ಪರಿಶೀಲನೆಗೆ ಕಾರ್ಯಪಡೆ ರಚಿಸಲು ಒತ್ತಾಯ

ಬೆಂಗಳೂರು: ರಾಜ್ಯದಲ್ಲಿನ ಆರ್ಥಿಕ ಬೆಳವಣಿಗೆಯ ಸ್ಪಷ್ಟ ಚಿತ್ರಣ ಯಾರಲ್ಲೂ ಇಲ್ಲ. ಕಳೆದ ಆರು ವರ್ಷಗಳಲ್ಲಿ ಬೆಂಗಳೂರು ಸುತ್ತಮುತ್ತ ನಡೆದಿರುವ ಕೈಗಾರಿಕಾ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಕೊಳೆಗೇರಿಗಳಿಗೆ ನಿವೇಶನ ಹಂಚಿಕೆ ಬಗ್ಗೆ ಪರಿಶೀಲಿಸಲು ಕಾರ್ಯಪಡೆ ರಚಿಸುವಂತೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಆಗ್ರಹಿಸಿದರು.

ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಆರ್ಥಿಕ ಬೆಳವಣಿಗೆಗೆ ನಾನು ಅಡ್ಡಿಪಡಿಸುತ್ತಿಲ್ಲ. ಬೇಕಾದರೆ ಮುಖ್ಯಮಂತ್ರಿಗಳು ಕೈಗಾರಿಕೆಗಳ ಮೂಲಭೂತ ಸೌಕರ್ಯಕ್ಕೆ 1000 ಕೋಟಿ ರೂಪಾಯಿ ಯೋಜನೆ ರೂಪಿಸಿದರೂ ನನ್ನ ವಿರೋಧವಿಲ್ಲ. ಇದರಿಂದ ಹಳ್ಳಿ ಜನರಿಗೆ ನಾಲ್ಕು ದಿನ ತೊಂದರೆ ಆದರೂ ಪರವಾಗಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.

ಒಬ್ಬ ವ್ಯಕ್ತಿ ಅಥವಾ ವರ್ಗವನ್ನು ಸಂತೈಸಲು ನಾನು ರಾಜಕಾರಣ ಮಾಡುವುದಿಲ್ಲ. ದೆಹಲಿಯ ನಾಯಕರಿಂದ ಅಥವಾ ಮಾಧ್ಯಮಗಳಿಂದ ಹೊಗಳಿಸಿಕೊಳ್ಳುವ ರಾಜಕೀಯ ನನಗೆ ಬೇಡ. ಕೈಗಾರಿಕಾ ಬೆಳವಣಿಗೆ ಹೆಸರಲ್ಲಿ, ಬಡಾವಣೆಗಳ ನಿರ್ಮಾಣದ ನೆಪದಲ್ಲಿ ವಂಚನೆ ನಡೆದಿದೆ ಎಂದರು.

ಬಡವರ ಜಮೀನನ್ನು ಎಕರೆಗೆ 7-8 ಲಕ್ಷ ನೀಡಿ ಖರೀದಿಸಿ, ನಂತರ ಅದನ್ನು ಕೋಟ್ಯಾಂತರ ರೂ.ಗಳಿಗೆ ಮಾರಾಟ ಮಾಡುವುದು ಆರ್ಥಿಕ ಬೆಳವಣಿಗೆಯೇ ಎಂದು ಪ್ರಶ್ನಿಸಿದ ದೇವೇಗೌಡರು, ಬಡವರ ನಿರ್ಲಕ್ಷ್ಯಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+