‘ಸ್ಪರ್ಶ’ದಲ್ಲಿ ರಸಋಷಿ ಕುವೆಂಪು ಪ್ರಪಂಚ
‘ಸ್ಪರ್ಶ’ದಲ್ಲಿ ರಸಋಷಿ ಕುವೆಂಪು ಪ್ರಪಂಚ
ಡಿ.21ರಿಂದ 31ರವರೆಗೆ ಸ್ಪರ್ಶ ಬಾನುಲಿ ಕೇಂದ್ರದಿಂದ ಕುವೆಂಪು ಶತಮಾನೋತ್ಸವದ ವಿಶೇಷ ಕಾರ್ಯಕ್ರಮಗಳು
ಡಿಸೆಂಬರ್ 28ರಂದು ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ದೇ. ಜವರೇಗೌಡ ಕುವೆಂಪು ಅವರೊಂದಿಗಿನ ಅನುಭವಗಳನ್ನು ವಿವರಿಸಲಿದ್ದಾರೆ.
ಡಿಸೆಂಬರನ 29 ರಂದು ಪ್ರೊ. ಪದ್ಮಾ ಶಿವರುದ್ರಪ್ಪ ಕುವೆಂಪು ಅವರ ರಾಮಾಯಣ ದರ್ಶನಂ ಬಗ್ಗೆ ಮಾತನಾಡಲಿದ್ದಾರೆ.
ಡಿಸೆಂಬರ್ 30 ರಂದು ಹಿರಿಯ ರಂಗಕರ್ಮಿ ಹಾಗೂ ನಟ ಸಿ.ಆರ್.ಸಿಂಹ ಕುವೆಂಪು ಜೀವನ ಸಾರ ವಿವರಿಸುವ ರಸಖುಷಿ ನಾಟಕ ಹಾಗೂ ಉಳಿದ ನಾಟಕಗಳ ಬಗ್ಗೆ ಅಭಿಪ್ರಾಯ ಮಂಡಿಸುವರು.
ಡಿಸೆಂಬರ್ 31 ರಂದು ಕಾನೂರು ಸುಬ್ಬಮ್ಮ ಹೆಗ್ಗಡತಿ ಚಿತ್ರದಲ್ಲಿ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿದ ನಟಿ ತಾರಾ ಆ ಕಾದಂಬರಿ ಬಗ್ಗೆ ತಮಗನ್ನಿಸಿದ್ದನ್ನು ಶ್ರೋತೃಗಳೊಂದಿಗೆ ಹಂಚಿಕೊಳ್ಳುವರು.
ಸಂದರ್ಶನ ಪ್ರಸಾರದ ಮಧ್ಯೆ ಕುವೆಂಪು ರಚಿಸಿದ ಗೀತೆಗಳು ಪ್ರಸಾರವಾಗಲಿದೆ.
ಇದು ಸ್ಪರ್ಶ ವಾಹಿನಿಂದ ಕುವೆಂಪು ಅವರಿಗೆ ಸಲ್ಲಿಸುತ್ತಿರುವ ಗೌರವ. ‘ ಸ್ಪರ್ಶ’ ಬಾನುಲಿ ಕೇವಲ ಬೆಂಗಳೂರು ಕೇಳುಗರಿಗಷ್ಟೇ ಅಲ್ಲ , ಹೊರ ದೇಶದ ಶೋತೃಗಳನ್ನು ತಲುಪಲಿದೆ ಎಂದು ಸ್ಪರ್ಶ ಕನ್ನಡ ವಾಹಿನಿ ನಿರ್ದೇಶಕ ಚೈತನ್ಯ ಹೆಗಡೆ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications